

ಬೈಂದೂರು: ಆಡಳಿತ ಸೌಧದಲ್ಲಿರುವ ಸಿಬ್ಬಂದಿ ತಮಗೆ ವಹಿಸಿದ ಕೆಲಸ ವಾಡುತ್ತಿಲ್ಲ ಬದಲಾಗಿ ಅವರು ದಲ್ಲಾಳಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಇಲ್ಲಿ ಜನ ಸಾವಾನ್ಯರ ಅಹವಾಲುಗಳಿಗೆ ಸ್ಪಂದನೆ ದೊರಕುತ್ತಿಲ್ಲ, ಕಟ್ಟಡದಲ್ಲಿ ಸಿಸಿಟಿವಿಯೂ ಚಾಲ್ತಿಯಲ್ಲಿಲ್ಲ. ಶೌಚಗೃಹ ಗಬ್ಬುನಾರುತ್ತಿದೆ ಎಂದು ಕೆಡಿಪಿ ಸದಸ್ಯ ನರಸಿಂಹ ಹಳಗೇರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬೈಂದೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಕೆಡೆಪಿ ಸಭೆಯ ಆರಂಭದಲ್ಲೇ ಸದಸ್ಯರು ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಸದಸ್ಯ ನರಸಿಂಹ ಹಳಗೇರಿ ಅವರ ಮಾತಿಗೆ ಧನಿಗೂಡಿಸಿದ ಸದಸ್ಯ ಶೇಖರ ಪೂಜಾರಿ, ತಹಸೀಲ್ದಾರರಿಗೆ ಸಿಬ್ಬಂದಿ ಮೇಲೆ ಹಿಡಿತವಿಲ್ಲ ಎಂದು ಕಿಡಿಕಾರಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಗಂಟಿಹೊಳೆ, ತಾಲೂಕು ಕಚೇರಿ ಲಂಚದ ಕೇಂದ್ರವಾಗಿ ವಾರ್ಪಟ್ಟಿದೆ, ಇಲ್ಲಿನ ಸಿಬ್ಬಂದಿ ಬಗ್ಗೆ ಹಲವು ದೂರುಗಳ ಬಂದ ಹಿನ್ನೆಲೆಯಲ್ಲಿ ಈಗಾಗಲೇ ಹಲವು ಸಭೆ ನಡೆಸಿ ಸಂಬಂಧಿತರಿಗೆ ಸೂಚನೆ ನೀಡಲಾಗಿದೆ. ಆದರೆ ಯಾವುದೇ ಸುಧಾರಣೆ ಕಂಡಿಲ್ಲ. ಇಲ್ಲಿನ ಸಿಬ್ಬಂದಿ ದುರ್ವತನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಬಗ್ಗೆ ಆಡಳಿತ ಸೌಧದಲ್ಲಿ ಕೆಡಿಪಿ ಸದಸ್ಯರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಸಂಬಂಧಿತರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿದ್ಯುತ್ ಸಮಸ್ಯೆ ಸರಿಪಡಿಸಿ: ಗ್ರಾಮೀಣ ಭಾಗದಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕೊರತೆಯಿಂದಾಗಿ ಗುಣಮಟ್ಟದ ವಿದ್ಯುತ್ ಇಲ್ಲದೆ ಕೃಷಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಅಗತ್ಯ ಕ್ರಮ ಕೈಗೊಳ್ಳುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಬೈಂದೂರು ವ್ಯಾಪ್ತಿಯಲ್ಲಿ ಸುವಾರು 27 ಟ್ರಾನ್ಸ್‌ಫಾರ್ಮರ್ ಬೆಡಿಕೆಯಿದ್ದು, ಈಗಾಗಲೇ 10 ಟ್ರಾನ್ಸ್‌ಫಾರ್ಮರ್ ಅಳವಡಿಸಲಾಗಿದೆ. ಉಳಿದವುಗಳನ್ನು ಹಂತ ಹಂತವಾಗಿ ಅಳವಡಿಸಲಾವುದು ಎಂದರು.
ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಬೈಂದೂರು ತಾಲೂಕಿಗಿಗೆ ಇದುವರೆಗೆ ಸುವಾರು 197 ಕೋಟಿ ರೂ. ಅಧಿಕ ಅನುದಾನ ಬಂದಿದ್ದು, ಈ ಬಗ್ಗೆ ಅಧಿಕಾರಿಗಳು ಜನರಿಗೆ ಮನದಟ್ಟು ವಾಡುವ ಕೆಲಸವಾಡಬೇಕು. ಸರ್ಕಾರದ ಯೋಜನೆಗಳ ಬಗ್ಗೆ ವಾಹಿತಿ ಕೊಡುವ ಕಾರ್ಯವಾಗಬೇಕು ಎಂದು ಕೆಡಿಪಿ ಸದಸ್ಯರಾದ ಶೇಖರ ಪೂಜಾರಿ, ಜಗದೀಶ ದೇವಾಡಿಗ, ಸತೀಶ ಶೆಟ್ಟಿ ಆಗ್ರಹಿಸಿದರು.
ತಾಲೂಕಿನ ಹಲವೆಡೆ ಚಿರತೆ ಹಾವಳಿ ಇದ್ದು, ಚಿರತೆ ಬಂಧಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೆಡಿಪಿ ಸದಸ್ಯೆ ಗ್ರೀಷ್ಮಾ ಬಿಢೆ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮೋಹನ್ ಪೂಜಾರಿ, ತಹಸೀಲ್ದಾರ ರಾಮಚಂದ್ರಪ್ಪ, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಕುವಾರ್, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಾಗಿ ವೈದ್ಯರು ಐದು ಸಾವಿರ ರೂ. ಲಂಚದ ಬೇಡಿಕೆ ಇಡುತ್ತಿದ್ದಾರೆ. ಇದರಿಂದಾಗಿ ಬಡವರಿಗೆ ಆರೋಗ್ಯ ಸೇವೆ ಪಡೆಯುವುದೇ ಸವಾಲಾಗಿದೆ ಎಂದು ಕೆಡಿಪಿ ಸದಸ್ಯ ಶೇಖರ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಾಲೂಕು ವೈದ್ಯಾಕಾರಿ ಡಾ.ಪ್ರೇವಾನಂದ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಗ್ನಿಶಾಮಕ ಠಾಣೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಡಯಾಲಿಸಿಸ್ ಟಕದ ಕಟ್ಟಡ ಸೇರಿದಂತೆ ಹಲವು ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದರೂ ಉದ್ಘಾಟನೆಯಾಗಿಲ್ಲ. ಕಾಮಗಾರಿ ಪೂರ್ಣಗೊಂಡ ಎಲ್ಲ ಕಟ್ಟಡಗಳನ್ನು ಶೀಘ್ರವೇ ಉದ್ಘಾಟಿಸಿ ಸಾರ್ವಜನಿಕರಿಗೆ ಉಪಯೋಗಕ್ಕೆ ದೊರಕುವಂತೆ ಮಾಡಬೇಕು. - ಗುರುರಾಜ ಗಂಟಿಹೊಳೆ, ಶಾಸಕ