ಔಷಧೀಯ ಸಸ್ಯಗಳ ಬಗ್ಗೆ ಮಕ್ಕಳಲ್ಲಿ ಅರಿವು ಅಗತ್ಯ

pdb
Published on

ಪಡುಬಿದ್ರಿ: ಪರಿಸರದಲ್ಲಿ ಶುದ್ಧ ಗಾಳಿಯ ಕೊರತೆ ಇದೆ. ಹೆಚ್ಚಳವಾಗುತ್ತಿರುವ ತಾಪಮಾನ ತಡೆಯಲು ಔಷಧೀಯ ಸಸ್ಯಗಳು ನಿಜಕ್ಕೂ ಅತಿ ಉಪಯುಕ್ತ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯಲ್ಲಿ ಮಕ್ಕಳಲ್ಲಿ ಅರಿವುಮೂಡಿಸುವ ದೃಷ್ಟಿಯಿಂದ ಔಷಧೀಯ ಗಿಡಗಳನ್ನು ನೆಡುವುದು ಅತ್ಯಂತ ಯೋಗ್ಯವಾಗಿದೆ ಎಂದು ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಪ್ರತಿನಿಧಿ ಪ್ರೊ.ನಿತ್ಯಾನಂದ ಹೇಳಿದರು.

ಅದಮಾರು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಉಡುಪಿ ರೋಟರಿ ಕ್ಲಬ್ ಸಂಯುಕ್ತವಾಗಿ ಅದಮಾರಿನ ಶಾಲಾ ಆವರಣದಲ್ಲಿ ಸೋಮವಾರ ಹಮ್ಮಿಕೊಂಡ ವಿವಿಧ ಔಷಧೀಯದ ಸಸ್ಯಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ರೋಟರಿ ಕ್ಲಬ್ ಉಡುಪಿ ಅಧ್ಯಕ್ಷ ಗುರುರಾಜ ಭಟ್, ಕಾಲೇಜಿನ ಪ್ರಾಂಶುಪಾಲ ಸಂಜೀವ ನಾಯ್ಕ, ಆಂಗ್ಲ ಮಾಧ್ಯಮ ಪ್ರೌಢಶಾಲೆ ಮುಖ್ಯಶಿಕ್ಷಕ ಮಂಜುನಾಥ ಎ.ವಿ., ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕ ಶ್ರೀಕಾಂತ ರಾವ್, ಶಿಕ್ಷಕಿ ನವ್ಯಾ ಬಿ.ಎಸ್, ಮಂಜುನಾಥ ಉಪಾಧ್ಯಾಯ, ರಾಮಚಂದ್ರ ಉಪಾಧ್ಯಾಯ, ವನಿತಾ ಉಪಾಧ್ಯಾಯ , ಚಂದ್ರಶೇಖರ ಅಡಿಗ, ಡಾ.ದಯಾನಂದ ಶೆಟ್ಟಿ, ಕೆ.ಎಸ್.ಕಾರಂತ್, ಜೆ.ಗೋಪಾಲಕೃಷ್ಣ ಪ್ರಭು, ಕಾಲೇಜಿನ ಕ್ಯಾಂಪಸ್ ಮ್ಯಾನೇಜರ್ ಚಂದ್ರಶೇಖರ್ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಎನ್ನೆಸ್ಸೆಸ್ ಅಧಿಕಾರಿ ಜಯಶಂಕರ ಕಂಗಣ್ಣಾರು ಸ್ವಾಗತಿಸಿದರು. ಇತಿಹಾಸ ಉಪನ್ಯಾಸಕ ಮಾಧುರಾಜ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net