

ಬೈಂದೂರು: ಆಧುನಿಕ ಕೃಷಿ ಪದ್ಧತಿ ಅಳವಡಿಕೆಯಿಂದ ಕೃಷಿಯನ್ನು ಲಾಭದಾಯಕವಾಗಿ ಬೆಳೆಸಬಹುವುದಾಗಿದೆ. ಕಾಲದ ಬದಲಾವಣೆಗೆ ಒಗ್ಗಿಕೊಂಡಂತೆ ಕೃಷಿ ಕ್ಷೇತ್ರದಲ್ಲಾಗುವ ಬದಲಾವಣೆಗಳು ರೈತರಿಗೆ ಲಾಭವನ್ನು ಹೆಚ್ಚಿಸುತ್ತದೆ ಎಂದು ಉದ್ಯಮಿ ಜಿ.ಗೋಕುಲ ಶೆಟ್ಟಿ ಉಪ್ಪುಂದ ಹೇಳಿದರು.
ಯಡ್ತರೆ ಬಂಟರ ಯಾನೆ ನಾಡವರ ಸಂಕೀರ್ಣದಲ್ಲಿ ಉತ್ಸವ ಸಮಿತಿ ಬೈಂದೂರು, ಸಮಷ್ಟಿ ಪ್ರತಿಷ್ಠಾನ, ರೈತೋತ್ಧಾನ ಬಳಗ ಹಾಗೂ ಬೈಂದೂರು ರೋಟರಿ ಕ್ಲಬ್ ಸಹಯೋಗದಲ್ಲಿ ನಡೆದ ಮೂರು ದಿನಗಳ ಹಲಸು ಹಾಗೂ ಕೃಷಿ ಮೇಳ ಉದ್ಘಾಟಿಸಿ ವಾತನಾಡಿದರು.
ರೈತರು ಬೆಳೆದ ಬೆಳೆಗಳು ನೇರವಾಗಿ ಗ್ರಾಹಕರಿಗೆ ದೊರೆತಾಗ ಕೃಷಿ ಕ್ಷೇತ್ರ ಇನ್ನಷ್ಟು ಯಶಸ್ವಿಯಾಗಿ ಮುನ್ನಡೆಯುತ್ತದೆ. ಇಂತಹ ಮೇಳಗಳ ಮೂಲಕ ಗ್ರಾಮೀಣ ಭಾಗದ ರೈತರಿಗೆ ಹೊಸ ವಿಧಾನಗಳ ಪರಿಚಯವಾಗುತ್ತದೆ. ಸಾರ್ವಜನಿಕರು ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಮೃದ್ಧ ಜನಸೇವಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್.ಸುರೇಶ ಶೆಟ್ಟಿ, ಜಿ.ಪಂ. ವಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಉದ್ಯಮಿ ಜಯಾನಂದ ಹೋಬಳಿದಾರ್, ಅನುರಾಧಾ ಗಂಟಿಹೊಳೆ, ಹಿರಿಯ ಕೃಷಿಕ ಹೊಸ್ಕೋಟೆ ವೆಂಕಟೇಶ ಹೆಬ್ಬಾರ್, ಜಿ.ಪಂ. ವಾಜಿ ಸದಸ್ಯೆ ಗೌರಿ ದೇವಾಡಿಗ, ಬೈಂದೂರು ಬಂಟರ ಯಾನೆ ನಾಡವರ ಸಂ ಅಧ್ಯಕ್ಷ ಶಶಿಧರ ಶೆಟ್ಟಿ ಸಾಲ್ಗದ್ದೆ, ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನಾ ಭಜನಾ ಪರಿಷತ್ ಅಧ್ಯಕ್ಷ ರುರಾಮ ಕೆ.ಪೂಜಾರಿ, ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ., ಉತ್ಸವ ಸಮಿತಿ ಸಹ ಸಂಚಾಲಕ ಗಣೇಶ ಉಪ್ಪುಂದ, ಸಂದೇಶ ಭಟ್ ಉಪ್ಪುಂದ ಇದ್ದರು.
ಹಲಸು ಮೇಳ ಸಂಯೋಜಕ ಪ್ರದೀಪ ಕುವಾರ್ ಶೆಟ್ಟಿ ಕಾರಿಕಟ್ಟೆ ಸ್ವಾಗತಿಸಿದರು. ಸಂಯೋಜಕ ಶ್ರೀಧರ ಖಾರ್ವಿ ಮರವಂತೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ರೈತರು ಕೇವಲ ಒಂದೇ ಬೆಳೆಯನ್ನು ನಂಬಿಕೊಳ್ಳದೆ ಸಮಗ್ರ ಕೃಷಿಗೆ ಪೂರಕವಾದ ಉಪಕಸಬುಗಳನ್ನು ಅಳವಡಿಸಿಕೊಳ್ಳುವ ಅನಿವಾರ್ಯತೆಯಿದೆ. ರೈತರಿಗೆ ಉತ್ತಮ ವಾರುಕಟ್ಟೆ, ದರ, ಶೀತಲೀಕರಣ ಸಹಿತವಾದ ಪೂರಕ ವ್ಯವಸ್ಥೆ ಕೃಷಿ ಉತ್ಪಾದನೆಗೆ ದೊರೆಯಬೇಕು.
-ಹೊಸ್ಕೋಟೆ ವೆಂಕಟೇಶ ಹೆಬ್ಬಾರ್, ಹಿರಿಯ ಕೃಷಿಕ