ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

20ANG1- protest
Published on

ಅಣ್ಣಿಗೇರಿ: ತಾಲೂಕನ್ನು ಬರಪೀಡಿತ ಎಂದು ಘೊಷಣೆ ಮಾಡದ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಪಟ್ಟಣದಲ್ಲಿ ಬುಧವಾರ ಬಿಜೆಪಿ ಮುಖಂಡರು ಸ್ಥಳೀಯ ಅಮೃತೇಶ್ವರ ದೇವಸ್ಥಾನ ಬಯಲಿನಿಂದ ವಿವೇಕಾನಂದ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.


ಷಣ್ಮುಖಪ್ಪ ಗುರಿಕಾರ ಮಾತನಾಡಿ, ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಮುಂಗಾರು ಬೆಳೆ ವಿಮೆ ಪರಿಹಾರದ ಮೊತ್ತವನ್ನು ತಕ್ಷಣವೇ ರೈತರ ಖಾತೆಗೆ ಬಿಡುಗಡೆ ಮಾಡಬೇಕು ಮತ್ತು ತಾಲೂಕನ್ನು ಬರಪೀಡಿತ ಎಂದು ಘೊಷಿಸಲು ಆಗ್ರಹಿಸಿ ಹಲವಾರು ರೈತ ಹೋರಾಟ ಸಮಿತಿ ಪದಾಧಿಕಾರಿಗಳು ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಪ್ರತಿಭಟಿಸಿದರು.



ಸಿದ್ದನಗೌಡ ಪಾಟೀಲ್, ಬಸವರಾಜ ಕುಂದಗೋಳಮಠ, ಶಿವಾನಂದ ಹೊಸಳ್ಳಿ, ಬಸವರಾಜ್ ಯಳವತ್ತಿ, ಶಿವಯೋಗಿ ಸೂರಕೋಡ, ನಿಜಗುಣಪ್ಪ ಅಕ್ಕಿ, ಸಿ.ಜಿ. ನಾವಳ್ಳಿ, ಜಗದೀಶ ಚವಡಿ, ತವನೇಶ ನಾವಳ್ಳಿ, ಈಶಪ್ಪ ಹೊಂಬಳ, ಶ್ರೀಗಿರಿ ಗಿರಡ್ಡಿ, ನಾಗಲಿಂಗಪ್ಪ ದಳವಾಯಿ, ಶಿವಾನಂದ ಹಾಳದೋಟರ, ನಾಗನಗೌಡ ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net