ನಿರ್ಲಕ್ಷಿತರಿಗೆ ಆಶ್ರಯ ನೀಡುವುದು ಶ್ಲಾಘನೀಯ

19 KRN-1
Published on

ಕೆ.ಆರ್.ನಗರ: ವೃದ್ಧಾಶ್ರಮ ನಡೆಸಿ ನಿರಾಶ್ರಿತರು ಮತ್ತು ನಿರ್ಲಕ್ಷ್ಯಕ್ಕೊಳಗಾದವರಿಗೆ ಆಶ್ರಯ ನೀಡುವುದು ಶ್ಲಾಘನೀಯ ಕಾರ್ಯ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.


ಪಟ್ಟಣದ ಈಶ್ವರ ನಗರದಲ್ಲಿ ಮಂದಮತಿ ಮಹಿಳೆಯರ ಅನುಪಾಲನಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಉಳ್ಳವರು ಆಶ್ರಮಗಳಿಗೆ ತಮ್ಮ ಕೈಲಾದ ಸೇವೆ ಮಾಡಿ ನೊಂದವರ ನೆರವಿಗೆ ಧಾವಿಸಬೇಕು. ಅನುಪಾಲನಾ ಕೇಂದ್ರಕ್ಕೆ ನಾನು ನಿರಂತರವಾಗಿ ಸಹಕಾರ ನೀಡಲಿದ್ದು ಸರ್ಕಾರದಿಂದ ದೊರೆಯುವ ಎಲ್ಲ ಸವಲತ್ತುಗಳನ್ನು ಕೊಡಿಸಲಾಗುವುದು ಎಂದು ಭರವಸೆ ನೀಡಿದರು.


ಮಾತೃಶ್ರೀ ವೃದ್ಧಾಶ್ರಮದ ಕಾರ್ಯದರ್ಶಿ ಕುಪ್ಪೆ ಮಂಜುನಾಥ್ ಮಾತನಾಡಿ, ಪ್ರಸ್ತುತ 7 ಜನರಿದ್ದು 25 ಮಂದಿಗೆ ಆಶ್ರಯ ನೀಡಲು ಅವಕಾಶವಿದೆ. ನಿರ್ಗತಿಕ ಮಹಿಳೆಯರನ್ನು ನಮ್ಮ ಕೇಂದ್ರಕ್ಕೆ ದಾಖಲಿಸಲು ನಾಗರಿಕರು ಸಹಕಾರ ನೀಡಬೇಕು. ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಮಡಿಕೇರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಮಂದಮತಿ ಮಹಿಳೆಯರಿಗೆ ದಾಖಲಾಗಲು ಅವಕಾಶವಿದೆ ಎಂದರು.


ಪುರಸಭೆ ಸದಸ್ಯ ಶಂಕರ್ ಸ್ವಾಮಿ, ಮಾಜಿ ಸದಸ್ಯ ಕೆ.ವಿನಯ್, ತಾಪಂ ಮಾಜಿ ಅಧ್ಯಕ್ಷ ಎಚ್.ಟಿ.ಮಂಜುನಾಥ್, ಕೇಂದ್ರದ ಆಪ್ತ ಸಮಾಲೋಚಕಿ ಲಕ್ಷ್ಮೀದೇವಿ, ಸಿಬ್ಬಂದಿ ನಟರಾಜ್, ಮಿಥುನ್, ಶಿವಗಂಗೆ, ರೋಜಾಮಣಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net