ಮೂಲ ಸ್ವರೂಪದಲ್ಲಿಯೇ ಎಂ.1ನಾಲೆ ನಿರ್ಮಿಸಿ

14 KAMPLI 01
ಕಂಪ್ಲಿ ತಾಲೂಕಿನ ದೇವಸಮುದ್ರ ಗ್ರಾಮದ ಎಲ್‌ಎಲ್ ಕಾಲುವೆಗೆ ಎಂ.1 ವಿತರಣಾ ನಾಲೆಯ ಬದಿಗೋಡೆ, ನಾಲೆಗೆ ಗೇಟ್ ಅಳವಡಿಸುವ ಕಾಮಗಾರಿ ಬಳಿ ರೈತರು ಟಿಬಿಡ್ಯಾಂ ಜೆಇ ಶ್ರಾವಣಿಯೊಂದಿಗೆ ಚರ್ಚಿಸಿದರು. ರೈತರಾದ ಕಡೆಮನಿ ಪಂಪಾಪತಿ, ಪಿ.ಮಧುಬಾಬು, ಜಿ.ಪಂಪನಗೌಡ, ಎಂ.ಜಡೇಗೌಡ, ಅಳ್ಳಳ್ಳಿ ವೀರೇಶ ಇತರರಿದ್ದರು.
Published on

ಕಂಪ್ಲಿ: ತಾಲೂಕಿನ ದೇವಸಮುದ್ರ ಗ್ರಾಮದ ಎಲ್‌ಎಲ್ ಕಾಲುವೆಯ ಎಂ.1 ವಿತರಣಾ ನಾಲೆಗೆ ಬದಿಗೋಡೆ, ಗೇಟ್ ಅಳವಡಿಸುವ ಕಾಮಗಾರಿ ಶನಿವಾರ ಪ್ರಗತಿಯಲ್ಲಿದ್ದು, ಪರಿಶೀಲನೆಗೆ ಟಿಬಿಡ್ಯಾಂ ಇಂಜಿನಿಯರ್ ಸ್ಥಳಕ್ಕೆ ಬೇಟಿ ನೀಡಿದ್ದರು. ಎಂ.1 ವಿತರಣಾ ನಾಲೆಯ ಮೂಲ ಸ್ವರೂಪದಂತೆಯೇ ನಿರ್ಮಿಸುವಂತೆ ರೈತರು ಪಟ್ಟು ಹಿಡಿದ ಪ್ರಸಂಗ ನಡೆಯಿತು.

ರೈತ ಮುಖಂಡರಾದ ಕಡೆಮನಿ ಪಂಪಾಪತಿ ಮತ್ತು ಪಿ.ಮಧುಬಾಬು ಮಾತನಾಡಿ, ಎಂ.1 ವಿತರಣಾನಾಲೆಗೆ 40 ಕ್ಯೂಸೆಕ್ಸ್‌ನಷ್ಟು ನೀರು ಹರಿಯಲಿದ್ದು, 8.50ಕಿ.ಮೀ.ನಷ್ಟು ನೀರು ಹರಿದು ಸುಮಾರು 2100 ಎಕರೆಯಷ್ಟು ಭೂಮಿಗೆ ನೀರುಣಿಸಬೇಕಿದೆ. ಹಳೆಯ ಸ್ವರೂಪದ ನಾಲೆಯ ನೀರು ಕಡೆ ಭೂಮಿಗೆ ತಲುಪದೆ ರೈತರಿಗೆ ತೊಂದರೆಯಾಗುತಿತ್ತು.

ಈಗ ನಿರ್ಮಿಸುತ್ತಿರುವ ನಾಲೆಯ ಗೋಡೆ ಎರಡು ಅಡಿ ಮುಂಚಾಚಿದ್ದು ಇದರಿಂದಲು ಕಡೆ ಅಂಚಿನ ಭೂಮಿಗೆ ನೀರು ತಲುಪಲಾರದು. ರೈತರು ಕಷ್ಟಪಡಬೇಕಾಗುತ್ತಾದೆ. ಅದ್ದರಿಂದ ಮೂಲ ಸ್ವರೂಪದಂತೆಯೇ ನಾಲೆ ನಿರ್ಮಿಸುವಂತೆ ರೈತರು ವಾದಿಸಿದರು.

ಟಿಬಿಡ್ಯಾಂ ಗುಂಡ್ಲಕೆರೆ ಜೆಇ ಶ್ರಾವಣಿ ಮಾತನಾಡಿ, ಎಂ.1ವಿತರಣಾ ನಾಲೆಯ ಸ್ವರೂಪ ಬದಲಾದರೂ ಮೊದಲಿನ ನಾಲೆಗಿಂತ ಉತ್ತಮ ಗುಣಮಟ್ಟದ್ದಾಗಿದ್ದು, ನಿಗಧಿಪಡಿಸಿದ 40ಕ್ಯೂಸೆಕ್ಸ್ ನೀರು ಸರಾಗವಾಗಿ ಹರಿಯುತ್ತದೆ.

ರೈತರಿಗೆ ನೀರಿನ ತೊಂದರೆಯಾಗದಂತೆ ಎಂ.1ವಿತರಣಾನಾಲೆ ನಿರ್ಮಿಸಿ ಅನುಕೂಲ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು. ರೈತರಾದ ಜಿ.ಪಂಪನಗೌಡ, ಎಂ.ಜಡೇಗೌಡ, ಅಳ್ಳಳ್ಳಿ ವೀರೇಶ, ಪಿ.ನಾಗರಾಜ, ಜಿ.ಚಂದ್ರಶೇಖರಗೌಡ, ಎಸ್.ಚನ್ನವೀರ, ಪಾಂಡುರಂಗಪ್ಪ, ಪಿ.ಪಂಪಾಪತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net