ಹೊಸಪೇಟೆ: ನಗರದ ಹೃದಯಭಾಗದಲ್ಲಿರುವ ಬಸವಣ್ಣ ಕಾಲುವೆಯಲ್ಲಿ ತ್ಯಾಜ್ಯ ಸೇರಿಕೊಂಡಿದ್ದು, ಶನಿವಾರ ರಾತ್ರಿ ಕಾಲುವೆ ನೀರು ರಸ್ತೆಯಲ್ಲಿ ಹರಿಯುತ್ತಿದೆ.
ವಿಜಯನಗರ ಆಳರಸರ ಕಾಲದ ಈ ಕಾಲುವೆ ಚರಂಡಿಯಾಗಿ ಮಾರ್ಪಟ್ಟಿದೆ. ತುಂಗಭದ್ರಾ ಜಲಾಶಯದಿಂದ ಈ ಕಾಲುವೆಗೆ 120 ಕ್ಯುಸೆಕ್ ನೀರು ಬಿಡಲಾಗಿತ್ತು. ಕಾಲುವೆಯಲ್ಲಿ ಕಸ ಕಡ್ಡಿ ಸೇರಿಕೊಂಡಿದ್ದು, ಮೂರಂಗಡಿ ವೃತ್ತದ ಬಳಿ ನೀರು ಹರಿಯುತ್ತಿದೆ. ಜನರ ಸಂಚಾರಕ್ಕೂ ತೊಂದರೆ ಆಗಿದೆ. ನಗರಸಭೆ ಮಾತ್ರ ತನಗೂ ಈ ಕಾಲುವೆಗೂ ಸಂಬಂಧ ಇಲ್ಲದಂತೆ ಇದೆ. ಆದರೆ ಕಾಲುವೆಗೆ ಚರಂಡಿ ನೀರು, ತ್ಯಾಜ್ಯ ಬಿಡಲಾಗುತ್ತಿದೆ. ಇದರಿಂದ ಕಾಲುವೆ ನೀರು ಚರಂಡಿಗೆ ಹರಿಯುತ್ತಿದೆ. ನಗರಸಭೆಯೇ ಇದಕ್ಕೆ ಹೊಣೆಯಾಗಿದೆ. ಇದು ಮೊದಲ್ಲ ಆಗಾಗ ನಡೆಯುತ್ತೇಲೆ ಇರುತ್ತದೆ ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.