

ರಾಮನಗರ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ಗಳು ಸಾರ್ವಜನಿಕರಿಗೆ ಕೃಷಿ, ವ್ಯಾಪಾರ, ಗೃಹ, ವಿದ್ಯಾಭ್ಯಾಸ ಸಾಲಕ್ಕೆ ಒತ್ತು ನೀಡಬೇಕು ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2024&25ನೇ ಸಾಲಿನ ಬ್ಯಾಂಕುಗಳ ಜಿಲ್ಲಾ ಸಲಹಾ ಸಮಿತಿ ಮತ್ತು ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಬ್ಯಾಂಕ್ನವರು ಜಿಪಂ ಸಹಯೋಗದೊಂದಿಗೆ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಮಾ ಅಭಿಯಾನ ಆಯೋಜಿಸಿ, ಜನರಲ್ಲಿ ಈ ಕುರಿತು ಅರಿವು ಮೂಡಿಸಿ, ಹೆಚ್ಚಿನ ಜನರು ಈ ಯೋಜನೆಯ ಸವಲತ್ತನ್ನು ಪಡೆದುಕೊಳ್ಳಲು ಕ್ರಮವಹಿಸಬೇಕು ಎಂದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ಮೋಲ್ ಜೈನ್ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲ ಬ್ಯಾಂಕುಗಳು ಹೆಚ್ಚಿನ ಸಾಲ ಸೌಲಭ್ಯ ತ್ವರಿತಗತಿಯಲ್ಲಿ ಜನರಿಗೆ ಒದಗಿಸಬೇಕು ಹಾಗೂ ಬ್ಯಾಂಕ್ಗಳು ಕ್ರೆಡಿಟ್ ಕ್ಯಾಂಪ್ಗಳನ್ನು ಆಯೋಜಿಸಬೇಕು. ಎಲ್ಕ ಬ್ಯಾಂಕ್ಗಳು ಸಿ.ಡಿ ಅನುಪಾತವನ್ನು ಶೇ. 60ಕ್ಕಿಂತ ಹೆಚ್ಚು ಕಾಯ್ದುಕೊಳ್ಳಬೇಕು. ಈ ನಿಟ್ಟಿನಲ್ಲಿ ಇದಕ್ಕೆ ಬೇಕಾಗಿರುವ ಎಲ್ಲ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಿಳಿಸಿದರು.
ಬೆಂಗಳೂರು ದಣ ಜಿಲ್ಲೆಯ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ನ ಮುಖ್ಯ ವ್ಯವಸ್ಥಾಪಕ ಮೋಹನ್ ಕುಮಾರ್ ವೈ.ಎನ್. ಮಾತನಾಡಿ, ಜಿಲ್ಲೆಯಲ್ಲಿ 2024&25ನೇ ಸಾಲಿನ ವಾರ್ಷಿಕ ಗುರಿಯಲ್ಲಿ 12,905 ಕೋಟಿ ರೂ.ಗಳಗೆ 15,277 ಕೋಟಿ (ಶೇ. 118.38) ರೂ.ಗಳಷ್ಟು ಗುರಿ ಸಾಧಿಸಿದೆ ಎಂಧರು.
ಪ್ರಧಾನ ಮಂತ್ರಿ ಕಿರು ಉಳಿತಾಯ, ಕಿರು ವಿಮೆಗಳು (ಪಿಎಂಜೆಜೆಬಿವೈ ಹಾಗೂ ಪಿಎಂಎಸ್ಬಿವೈ), ಪಿಂಚಣಿ ಮತ್ತು ಕೇಂದ್ರ ಸರ್ಕಾರ ಪ್ರಾಯೋಜಿತ ಸಾಲಗಳಾದ ಮುದ್ರಾ ಯೋಜನೆ, ಪಿ.ಎಂ. ವಿಶ್ವಕರ್ಮ, ಪಿ.ಎಂ. ಸ್ವಾನಿಧಿ, ಪಿ.ಎಂ.ಎಫ್.ಎಂ.ಇ, ಪಿ.ಎಂ.ಇ.ಜಿ.ಪಿ ಯೋಜನೆ, ರಾಜ್ಯ ಸರ್ಕಾರದ ಪ್ರಾಯೋಜಿತ ಹಾಗೂ ಜಿಲ್ಲೆಗೆ ಸಂಬಂಧಿಸಿದ ಸಾಲ ಸೌಲಭ್ಯಗಳ ಕುರಿತು ಪರಿಶೀಲನೆ ಮಾಡಲಾಯಿತು.
2025&26ನೇ ಸಾಲಿನ ಡಿಸ್ಟ್ರಿಕ್ ಕ್ರೆಡಿಟ್ ಪ್ಲಾ$್ಯನ್ ಕುರಿತು ಪುಸ್ತಕ ಬಿಡುಗಡೆ ಮಾಡಲಾಯಿತು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಲೀಡ್ ಬ್ಯಾಂಕ್ ಅಧಿಕಾರಿ ಇಲ್ಲಾಸಾಹು, ನಬಾರ್ಡ್ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಬಿ.ವಿ. ಹರ್ಷಿತಾ, ಮೈಸೂರಿನ ಯೂನಿಯನ್ ಬ್ಯಾಂಕ್ನ ಪ್ರಾದೇಶಿಕ ಮುಖ್ಯಸ್ಥ ರಾಜ್ಕುಮಾರ್, ಮಂಡ್ಯದ ಕೆನರಾ ಬ್ಯಾಂಕ್ನ ಪ್ರಾದೇಶಿಕ ಮುಖ್ಯಸ್ಥೆ ಅನುರಾದ, ಲೀಡ್ ಬ್ಯಾಂಕ್ ಶಾಖೆಯ ಅಧಿಕಾರಿ ನಂದರಾಜು, ಸುಮಲತಾ ಸೇರಿ ಇತರರು ಇದ್ದರು.