ಆ.24ರ ಟೋಲ್ ಪ್ರತಿಭಟನೆಗೆ ಸಂಘಟನೆಗಳ ಬೆಂಬಲ

Toll-gate
Published on

ಪಡುಬಿದ್ರಿ: ಕಂಚಿನಡ್ಕ ಪ್ರದೇಶದಲ್ಲಿ ನಿರ್ಮಿಸಲುದ್ದೇಶಿಸಿರುವ ಟೋಲ್‌ಗೇಟ್ ವಿರೋಧಿಸಿ ಸುತ್ತಮುತ್ತಲಿನ ಗ್ರಾಮದಲ್ಲಿ ಜನಜಾಗೃತಿ ನಡೆಯುತ್ತಿದ್ದು, ಆ.24ರಂದು ನಡೆಯುವ ಪ್ರತಿಭಟನೆಗೆ ವಿವಿಧ ಸಂಘಟನೆ ಬೆಂಬಲ ಸೂಚಿಸಿವೆ.

ಉಡುಪಿ ಜಿಲ್ಲಾ ಕೃಷಿಕ ಸಂಘದ ಪದಾಧಿಕಾರಿಗಳು ಸದಸ್ಯರು ಭಾಗವಹಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು , ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಹಾಗೂ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ತಿಳಿಸಿದ್ದಾರೆ.

ಕಾರ್ಕಳ, ಪಡುಬಿದ್ರಿ, ಮೂಲ್ಕಿ, ಕಾಪು ಮೊದಲಾದ ಧಾರ್ಮಿಕ ಕ್ಷೇತ್ರವನ್ನು ಸಂದರ್ಶನ ಮಾಡುವ, ನಿಟ್ಟೆ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಗೆ ಕಂಚಿನಡ್ಕ ಟೋಲ್‌ಗೇಟ್‌ನಿಂದ ತೊಂದರೆ ಆಗುವುದು ಖಂಡಿತ. ಇದಕ್ಕೆ ನಮ್ಮ ವಿರೋಧವಿದೆ ಎಂದು ಪಡುಬಿದ್ರಿ ವೆಂಕಟರಮಣ ದೇವಳ ಮೊಕ್ತೇಸರ ಪ್ರಶಾಂತ್ ಶೆಣೈ ತಿಳಿಸಿದ್ದಾರೆ.

ಬೆಳ್ಮಣ್ ಜಿಎಸ್‌ಬಿ ಸಭಾ ಅಧ್ಯಕ್ಷ ಡಾ.ಪ್ರಭಾಕರ್ ನಾಯಕ್, ಸದಾಶಿವ ಪೈ, ಕಲಾವಿದ ಪಲಿಮಾರ್ ವೆಂಕಟರಮಣ ಕಾಮತ್, ಪಲಿಮಾರು ಗ್ರಾಪಂ ನಿಕಟಪೂರ್ವ ಅಧ್ಯಕ್ಷೆ ಗಾಯತ್ರಿ ದಿನೇಶ್ ಪ್ರಭು, ಅನಂತರಾಜ ಶೆಣೈ, ಮುಂಡ್ಕೂರು ವೆಂಕಟೇಶ್ ಕಾಮತ್, ಸಚ್ಚೇರಿಪೇಟೆ ರಾಮಚಂದ್ರ ಕಾಮತ್, ಹೆಜಮಾಡಿ ಸುರೇಶ್ ಶೆಣೈ, ಪಡುಬಿದ್ರಿ ಅರವಿಂದ ಕಾಮತ್, ಲಕ್ಷ್ಮಣ್ ಶೆಣೈ, ದೀಪಕ್ ಕಾಮತ್ ಕಾಂಜರಕಟ್ಟೆ ಟೋಲ್ ಗೇಟ್ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಪಡುಬಿದ್ರಿ ದೇವಾಡಿಗ ಸಂಘ ಟೋಲ್‌ಗೇಟ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದೆ. ಭಾರತೀಯ ಜನತಾ ಪಕ್ಷದ ಪಾರ್ಟಿಯ ಎಲ್ಲ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net