ತಾರತಮ್ಯ ನಿವಾರಣೆಗೆ ಸಂಘಟನಾತ್ಮಕ ಹೋರಾಟ ಅಗತ್ಯ

web 123
Published on

ಕಾ.ಬಿ.ವೆಂಕಟ್ ಅನಿಸಿಕೆ ಬಾಗೇಪಲ್ಲಿಯಲ್ಲಿ ಭೂಮಿ ಹಕ್ಕಿನ ಸಮಾವೇಶ

ಬಾಗೇಪಲ್ಲಿ: ತಾಲೂಕಿನ ಪ್ರತಿಯೊಬ್ಬರಿಗೂ ಭೂಮಿ ಮತ್ತು ವಸತಿಗಾಗಿ ಸಂಘಟನಾತ್ಮಕ ಹೋರಾಟ ಅಗತ್ಯವಾಗಿದೆ ಎಂದು ಅಖಿಲ ಭಾರತ ಕೃಷಿ ಕೂಲಿಕಾರರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕಾ.ಬಿ.ವೆಂಕಟ್ ತಿಳಿಸಿದರು.

ಪಟ್ಟಣದ ಕಲ್ಯಾಣ ಮಂಟಪದಲ್ಲಿ ಕೃಷಿ ಕೂಲಿಕಾರರ ಸಂಘದಿಂದ ಬುಧವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಭೂಮಿ ಹಕ್ಕಿನ ಸಮಾವೇಶ ಉದ್ದೇಶಿಸಿ ಮಾತನಾಡಿದರು.

ದೇಶದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಎರಡು ಎಕರೆ ಭೂಮಿಯನ್ನು ಸರ್ಕಾರಗಳು ನೀಡಲೇಬೇಕು ಹಾಗೂ ವಾಸಿಸಲು ಅನುಕೂಲವಾಗುವಂತಹ ವಸತಿ ವ್ಯವಸ್ಥೆ ಕಲ್ಪಿಸಬೇಕು. ನಿವೇಶನರಹಿತರಿಗೆ ನಿವೇಶನಗಳನ್ನು ನೀಡಿ, ಅಲ್ಲಿ ಮನೆ ನಿರ್ಮಾಣ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ಐದು ಲಕ್ಷ ರೂಪಾಯಿಗಳನ್ನು ಸಹಾಯಧನವಾಗಿ ನೀಡಬೇಕು ಎಂದು ಆಗ್ರಹಿಸಿದರು.

ದೇಶ, ರಾಜ್ಯ ಅಥವಾ ಸ್ಥಳೀಯವಾಗಿಯೇ ಆಗಿರಲಿ ಶೇ.15ರಷ್ಟು ಜನರ ಬಳಿ ಮಾತ್ರ ಅಧಿಕಾರ, ಸಂಪತ್ತು, ಭೂಮಿ, ಆರೋಗ್ಯ ಎಲ್ಲವೂ ಇವೆ. ಆದರೆ, ಇವೆಲ್ಲವೂ ಇತರರಿಗೂ ಸಮಾನವಾಗಿ ದೊರೆಯುವಂತೆ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದರು.

ತಾರತಮ್ಯಗಳನ್ನು ಹೋಗಲಾಡಿಸಲು ಎಲ್ಲೆಡೆ ಸಂಘಟನಾತ್ಮಕ ಹೋರಾಟಗಳನ್ನು ನಡೆಸುವ ಮೂಲಕ ಭೂಮಿ ವಸತಿ ಆರೋಗ್ಯ ಶಿಕ್ಷಣಗಳನ್ನು ಪಡೆಯಬೇಕಾಗಿದೆ. ಹಾಗಾಗಿ ಗ್ರಾಮೀಣ ಮಟ್ಟದಿಂದ ರಾಜ್ಯಮಟ್ಟದವರೆಗೂ ಬೃಹತ್ ಪ್ರಮಾಣದಲ್ಲಿ ಜನಸಂಘಟನೆ ಮಾಡುವ ಮೂಲಕ ಹಕ್ಕುಗಳನ್ನು ಪಡೆಯಬೇಕು ಎಂದರು.

ಫೆ.10ರಂದು ವಿಧಾನಸೌಧ ಚಲೋ

ಭೂಮಿ ,ವಸತಿ ಸೇರಿ ಹಲವು ಸೌಲಭ್ಯಗಳಿಗೆ ಒತ್ತಾಯಿಸಿ ಸುಮಾರು 5000ಕ್ಕೂ ಹೆಚ್ಚು ಕಾರ್ಯಕರ್ತರೊಂದಿಗೆ ಬಾಗೇಪಲ್ಲಿಯಿಂದ ಬೆಂಗಳೂರುವರೆಗೆ ೆ.10ರಂದು ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮ ಯಶಸ್ವಿಯಾಗಲು ಕ್ಷೇತ್ರದ ಪ್ರತಿ ಗ್ರಾಮದಲ್ಲೂ ಜನಸಂಘಟನೆ ನಡೆಸಿ, ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಲಾಗುವುದು ಎಂದು ವೆಂಕಟ್ ತಿಳಿಸಿದರು.

ಸಿಪಿಎಂ ಮುಖಂಡರಾದ ಡಾ. ಅನಿಲ್ ಕುಮಾರ್, ಎಂ.ಪಿ ಮುನಿವೆಂಕಟಪ್ಪ, ಬಿ.ಎನ್. ಮುನಿಕೃಷ್ಣಪ್ಪ, ಸಾವಿತ್ರಮ್ಮ ಮತ್ತಿತರರು ಇದ್ದರು.

ಪೋಟೋ: 8ಬಿಪಿಎಲ್2 ಭೂಮಿ ಹಕ್ಕಿನ ಸಮಾವೇಶ)))))

ಬಾಗೇಪಲ್ಲಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಭೂಮಿ ಹಕ್ಕಿನ ಸಮಾವೇಶದಲ್ಲಿ ಕಾ.ಬಿ.ವೆಂಕಟ್ ಮಾತನಾಡಿದರು.ಡಾ. ಅನಿಲ್ ಕುಮಾರ್, ಎಂ.ಪಿ. ಮುನಿವೆಂಕಟಪ್ಪ, ಸಾವಿತ್ರಮ್ಮ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net