

ಕಿನ್ನಿಗೋಳಿ: ಯಾವುದೇ ಸಂ ಸಂಸ್ಥೆ ಸವಾಜಮುಖಿ ಚಿಂತನೆಯ ಮೂಲಕ ಕೆಲಸ ವಾಡಿದಾಗ ವಾದರಿ ಸಂಸ್ಥೆಯಾಗಿ ಬೆಳೆಯಲು ಸಾಧ್ಯ ಎಂದು ಉಡುಪಿಯ ವಕೀಲ ಸಂಕಪ್ಪ ಎ. ಹೇಳಿದರು.
ಅವರು 10ನೇ ತೋಕೂರು ಫೇಮಸ್ ಯೂತ್ ಕ್ಲಬ್ ಮತ್ತು ಮಹಿಳಾ ಮಂಡಲದ 37ನೇ ವರ್ಷದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಕಿನ್ನಿಗೋಳಿ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು. ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುವಾ ಚಂದ್ರಶೇಖರ್, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ಬೈಕಂಪಾಡಿ ರೋಟರಿ ಕ್ಲಬ್ ಅಧ್ಯಕ್ಷ ಹರೀಶ್ ಬಿ. ಶೆಟ್ಟಿ, ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಶಶನ್ ಅಧ್ಯಕ್ಷ ಪದ್ಮಪ್ರಸಾದ್ ಜೈನ್, ಹಳೆಯಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಅರುಣ್ ಕುವಾರ್, 10ನೇ ತೋಕೂರು ಓಂಕಾರೇಶ್ವರೀ ಮಂದಿರದ ಅಧ್ಯಕ್ಷ ಸದಾಶಿವ ಕುಂದರ್, ಸಂಸ್ಥೆಯ ಗೌರವಾಧ್ಯಕ್ಷ ಗುರುರಾಜ ಎಸ್.ಪೂಜಾರಿ, ಪ್ರಧಾನ ಕಾರ್ಯದರ್ಶಿ ಹಿಮಕರ್ ಕೋಟ್ಯಾನ್, ಕೋಶಾಧಿಕಾರಿ ನವೀನ್‌ಚಂದ್ರ, ಮಹಿಳಾ ಮಂಡಲದ ಅಧ್ಯಕ್ಷೆ ಪ್ರೇಮಲತಾ ಯೋಗೀಶ್, ಕಾರ್ಯದರ್ಶಿ ಕುಸುಮಾ ಎಚ್.ಕೋಟ್ಯಾನ್, ಕೋಶಾಧಿಕಾರಿ ಇಂದಿರಾ ಸಂಜೀವ ಕರ್ಕೇರ ಉಪಸ್ಥಿರಿದ್ದರು.
ಪ್ರತೀಕ್ಷಾ, ನಿಧಿ ಯು.ಕೋಟ್ಯಾನ್, ದಿಶಾ ಅವರಿಗೆ ವಿದ್ಯಾನಿಧಿ ನೀಡಲಾಯಿತು.
ಸಾಧಕರಾದ ಹಿರಿಯ ನಾಗಸ್ವರ ವಾದಕ ಲೀಲಪ್ಪ ಶೇರಿಗಾರ್, ವಾಲ್ಟರ್ ಡಿಸೋಜ ಪಕ್ಷಿಕೆರೆ, ಮನೀಶ್ ರಾಜ್, ಮಹೇಶ್ ದೇವಾಡಿಗ, ದೀಪೇಶ್, ಸಾಗರ್ ಸುರೇಶ್ ದೇವಾಡಿಗ, ಲಕ್ಷ ಎ.ಸಾಲ್ಯಾನ್, ಧನುಷ್ ಆರ್.ಪೂಜಾರಿ ಅವರನ್ನು ಗೌರವಿಸಲಾಯಿತು. ಬೈಕಂಪಾಡಿ ರೋಟರಿ ವತಿಯಿಂದ ಸಂಸ್ಥೆಗೆ ಗ್ರಾಸ್ ಕಟ್ಟಿಂಗ್ ಯಂತ್ರ ನೀಡಲಾಯಿತು.
ಸಂಸ್ಥೆಯ ಅಧ್ಯಕ್ಷ ಭಾಸ್ಕರ ಅಮೀನ್ ಸ್ವಾಗತಿಸಿದರು. ಸಂಪತ್ ಶೆಟ್ಟಿ ನಿರೂಪಿಸಿದರು. ಮಹಮ್ಮದ್ ಶರೀಫ್ ವಂದಿಸಿದರು.