ವ್ಯವಹಾರಗಳಲ್ಲಿ ಸಕ್ರಿಯರಾದಾಗ ಸಂಸ್ಥೆ ಸಧೃಢ: ವೆಂಕಟರಮಣ ಖಾರ್ವಿ ಹೇಳಿಕೆ ; ಸದಸ್ಯರಿಗೆ ಶೇ.10 ಡಿವಿಡೆಂಡ್ ಘೋಷಣೆ

sabhe
ಉಪ್ಪುಂದ ರಾಣಿಬಲೆ ಮೀನು ಮಾರಾಟ ಪ್ರಾಥಮಿಕ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಕುಂದಾಪುರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್‌ಕುಮಾರ್ ಎಸ್.ವಿ.ಅವರನ್ನು ಸನ್ಮಾನಿಸಲಾಯಿತು
Published on

ಬೈಂದೂರು: ಸಂಘದ ಸದಸ್ಯರು ವ್ಯವಹಾರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ಸಹಕಾರಿ ಸಂಸ್ಥೆ ಸದೃಢವಾಗಿ ಬೆಳೆಯಲು ಸಾಧ್ಯ. ಸದಸ್ಯರು ಉತ್ತಮ ವ್ಯವಹಾರಗಳನ್ನು ಹೊಂದಿದಾಗ ಸಹಕಾರಿಯಿಂದ ಸಿಗುವ ಸೌಲಭ್ಯ ಬಳಸಿಕೊಂಡು ಆರ್ಥಿಕವಾಗಿ ಸಮಾಜದ ಮುನ್ನೆಲೆಗೆ ಬರಲು ಸಹಕಾರಿಯಾಗುತ್ತದೆ ಎಂದು ಉಪ್ಪುಂದ ರಾಣಿಬಲೆ ಮೀನು ಮಾರಾಟ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷ ವೆಂಕಟರಮಣ ಖಾರ್ವಿ ಹೇಳಿದರು.
ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಸದಸ್ಯರಿಗೆ ಶೇ.10 ಡಿವಿಡೆಂಡ್ ಘೋಷಿಸಿದರು.

ನಿವೃತ್ತಿ ಹೊಂದಿದ ಕುಂದಾಪುರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್‌ಕುಮಾರ್ ಎಸ್.ವಿ.ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ನಿರ್ದೇಶಕ ಶರತ್ ಖಾರ್ವಿ ವಾರ್ಷಿಕ ವರದಿ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಕಿಶೋರ್ ಆಯ-ವ್ಯಯ ಮಂಡಿಸಿದರು. ಮುಂದಿನ ಕಾರ್ಯಯೋಜನೆಗಳ ಕುರಿತು ಚರ್ಚೆ ನಡೆಸಿ ಸಭೆ ಅನುಮೋದನೆ ಪಡೆಯಲಾಯಿತು. ಅಕಾಲಿಕ ಮರಣ ಹೊಂದಿದ ಸಂಘದ ಸದಸ್ಯರಾದ ರಾಮದಾಸ ಖಾರ್ವಿ ಮತ್ತು ರಾಮಕೃಷ್ಣ ಖಾರ್ವಿ ಅವರ ವಾರೀಸುದಾರರಿಗೆ ಸಂಘದ ವತಿಯಿಂದ ಮರಣೋತ್ತರ ಪರಿಹಾರ ನಿಧಿ ಚೆಕ್ ಅನ್ನು ಹಸ್ತಾಂತರಿಸಲಾಯಿತು. ಸಂಘ ಉಪಾಧ್ಯಕ್ಷ ತಿಮ್ಮಪ ್ಪಖಾರ್ವಿ, ನಿರ್ದೇಶಕರಾದ ಬಿಾಗೇಶ ಖಾರ್ವಿ, ಎ.ಶ್ರೀನಿವಾಸ ಖಾರ್ವಿ, ಎಸ್.ಕೃಷ್ಣ ಖಾರ್ವಿ, ರಾಜೇಂದ್ರ ಖಾರ್ವಿ, ಶಂಕರ ಖಾರ್ವಿ, ನವೀನ ಖಾರ್ವಿ ಉಪಸ್ಥಿತರಿದ್ದರು. ನಿರ್ದೇಶಕ ಸುರೇಶ ಖಾರ್ವಿ ಸ್ವಾಗತಿಸಿ, ರವೀಂದ್ರ ಖಾರ್ವಿ ಪ್ರಾರ್ಥಿಸಿ, ಸುಬ್ರಹ್ಮಣ್ಯ ಎಂ.ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net