ಸಾವಯವ ಕೃಷಿ ಕಾರ್ಯಾಗಾರ ನಾಳೆ

5-msk-1A
ಮಸ್ಕಿಯ ಪತ್ರಿಕಾ ಭವನದಲ್ಲಿ ಆಮಂತ್ರಣ ಪತ್ರಿಕೆ ಹಾಗೂ ಕರಪತ್ರವನ್ನು ಇರಕಲ್ ಶಿವಶಕ್ತಿ ಪೀಠದ ಬಸವಪ್ರಸಾದ ಶರಣರು ಬಿಡುಗಡೆಗೊಳಿಸಿದರು. ಪ್ರಮುಖರಾದ ಬಸವರಾಜ ಸ್ವಾಮಿ ಹಸಮಕಲ್, ಅಮರೇಶ್, ಚಿನ್ನನಗೌಡ ಇತರರಿದ್ದರು.
Published on

ಮಸ್ಕಿ: ಜನರ ಹಸಿವು ನೀಗಿಸುವ ಮಹತ್ತರ ಜವಾಬ್ದಾರಿ ಹೊತ್ತಿರುವ ರೈತರಿಗೆ ಸಾವಯವ ಕೃಷಿ ಕುರಿತು ಕಾರ್ಯಾಗಾರವನ್ನು ಮಾ.7ರಂದು ತಾಲೂಕಿನ ಇರಕಲ್ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಇರಕಲ್ ಶಿವಶಕ್ತಿ ಪೀಠದ ಬಸವಪ್ರಸಾದ ಸ್ವಾಮೀಜಿ ಹೇಳಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಬುಧವಾರ ಆಮಂತ್ರಣ ಪತ್ರಿಕೆ ಹಾಗೂ ಪ್ರಚಾರ ಸಾಮಗ್ರಿ ಬಿಡುಗಡೆ ಮಾಡಿ ಮಾತನಾಡಿದರು. ಶಿವಶಕ್ತಿ ಪೀಠದಲ್ಲಿ 25 ವರ್ಷಗಳಿಂದ ಧಾರ್ಮಿಕ ಕಾರ್ಯಕ್ರಮದ ಜತೆಗೆ ಸಾಮಾಜಿಕ ಕಳಕಳಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರೈತರು, ಯೋಧರಿಗೆ ಗೌರವಿಸಲಾಗುವುದು. ರೈತರಿಗಾಗಿ ವಿಚಾರ ಗೋಷ್ಠಿ, ಆರೋಗ್ಯಕ್ಕಾಗಿ ಪಾರಂಪರಿಕ ವೈದ್ಯರ ಸಮಾವೇಶ, ರೈತರತ್ನ ಪ್ರಶಸ್ತಿ, ಉತ್ತಮ ಶಿಕ್ಷಕ, ಉತ್ತಮ ಸಂಗೀತಗಾರ, ಯುವ ಸ್ಫೂರ್ತಿ, ಉತ್ತಮ ಸಂಘ ಹೀಗೆ ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡುವುದರ ಜತೆಗೆ ಕ್ರೀಡಾಕೂಟ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಲಿವೆ ಎಂದರು. ಪ್ರಮುಖರಾದ ಬಸವರಾಜ ಸ್ವಾಮಿ ಹಸಮಕಲ್, ಅಮರೇಶ್, ಚಿನ್ನನಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net