ಸಾವಯವ ಕೃಷಿ ಕೈಗೊಳ್ಳಲು ಮುಂದಾಗಲಿ

3BRG1
filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (200, -1); aec_lux: 0.0; hist255: 0.0; hist252~255: 0.0; hist0~15: 0.0;
Published on

ಬೋರಗಾಂವ: ಸಾಂಪ್ರದಾಯಿಕ ಕಷಿ ಪದ್ಧತಿ ಕಣ್ಮರೆಯಾಗುತ್ತಿದೆ. ಅಲ್ಲದೆ ಹೆಚ್ಚುತ್ತಿರುವ ಆಧುನೀಕರಣ ಮತ್ತು ಯಾಂತ್ರೀಕರಣದಿಂದ ಕೃಷಿ ವಿಧಾನವೂ ಬದಲಾಗಿದೆ. ರಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ನಮ್ಮ ಆರೋಗ್ಯ ಅಪಾಯಕ್ಕೆ ಸಿಲುಕುತ್ತಿದೆ. ರೈತರು ಸಾವಯವ ಕಷಿಯತ್ತ ಒಲವು ತೋರಬೇಕು ಎಂದು ಸದಲಗಾ ಗೀತಾಶ್ರಮದ ಡಾ. ಶ್ರದ್ಧಾನಂದ ಸ್ವಾಮೀಜಿ ಮನವಿ ಮಾಡಿದರು.

ಸಮೀಪದ ಜನವಾಡದ ಗ್ರಾಮದಲ್ಲಿ ಮಹಾದೇವ ಸ್ವಾಮಿ ಮಠದ ಯಾತ್ರೆಯ ನಿಮಿತ್ತ ಯಾತ್ರಾ ಕಮಿಟಿ ವತಿಯಿಂದ ಸೋಮವಾರ ಆಯೋಜಿಸಿದ್ದ ಭವ್ಯ ಕೃಷಿಮೇಳ ಉದ್ಘಾಟಿಸಿ ಮಾತನಾಡಿದರು.

ಸಾವಯವ ಕಷಿಯಿಂದ ಉತ್ಪಾದನೆ ಹೆಚ್ಚಿಸಬೇಕಿದೆ. ಆದರೆ ಉತ್ಪಾದನೆ ಹೆಚ್ಚಳಕ್ಕೆ ರಸಾಯನಿಕ ಗೊಬ್ಬರಗಳ ಬಳಕೆ ತಪ್ಪಿಸುವುದು ಇಂದಿನ ಅಗತ್ಯ. ನಮ್ಮ ಜೀವನಶೈಲಿ ಕಷಿ ಆಧರಿಸಿದೆ. ಅದಕ್ಕಾಗಿ ಯೋಜಿತ ಕಷಿ ಮಾಡಿದರೆ ಖಂಡಿತವಾಗಿಯೂ ಪ್ರಗತಿಪರ ರೈತರಾಗಬಹುದು ಎಂದರು.

ಡಾ.ಅಪ್ಪಾಸಾಹೇಬ ಘಾಟಗೆ ಮಾತನಾಡಿ, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳಲ್ಲಿ ಮಹಾದೇವ ಸ್ವಾಮಿಗಳ ಯಾತ್ರೆ ಪ್ರಸಿದ್ಧಿ ಪಡೆದಿದೆ.

ಎಲ್ಲೆಡೆ ಜಾನುವಾರು ಪ್ರದರ್ಶನವೇ ಯಾತ್ರೆಯ ಆಕರ್ಷಣೆ. ಇಲ್ಲಿ 70ಕ್ಕೂ ಹೆಚ್ಚು ಕೃಷಿ ಮಳಿಗೆಗಳಿದ್ದು, ಮಾ.7ರ ವರೆಗೆ ಕಷಿ ಮೇಳ ನಡೆಯಲಿದೆ. ರೈತರು ಸದುಪಯೋಗ ಪಡೆಯಬೇಕು ಎಂದರು.

ಕಷಿ ತಜ್ಞ ಡಾ.ಸುರೇಶ ದೇಸಾಯಿ, ಮಠದ ಅರ್ಚಕ ರಾಮ ಮಗದುಮ್, ಮಹಾದೇವ ಸ್ವಾಮಿ, ಯಾತ್ರೆ ಸಮಿತಿಯ ಎಲ್ಲ ನಿರ್ದೇಶಕರು, ಗ್ರಾಪಂ ಸದಸ್ಯರು, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net