ಅಂಗಾಂಗ ನಿರ್ಧಾರ ಸಮಿತಿ ರಚನೆ - ಆರೋಗ್ಯ ಇಲಾಖೆ ಆದೇಶ

organ donation
Published on

ಬೆಂಗಳೂರು: ಜೀವಸಾರ್ಥಕತೆ ಯೋಜನೆಯಡಿ ಅಂಗಾಂಗ ಮತ್ತು ಅಂಗಾಂಶ ಕಸಿಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯಕೀಯ ತಜ್ಞರನ್ನು ಒಳಗೊಂಡ ಅಂಗಾಂಗ ನಿರ್ಧಾರ ಸಮಿತಿ (Organ Specific Committee) ಪುನರ್ ರಚಿಸಿ ಆದೇಶ ಹೊರಡಿಸಿದೆ.

ಈ ಸಂಬಂಧ ಮುಂದಿನ ಮೂರು ವರ್ಷಗಳ ಅವಧಿಗೆ 7 ಸಮಿತಿಗಳನ್ನು ರಚಿಸಲಾಗಿದ್ದು, ಸಮಿತಿಗಳ ಸದಸ್ಯರು ಅಂಗಾಂಗ ಕಸಿಗೆ ಸಂಬಂಧಿಸಿದಂತೆ ಸಾಮಾನ್ಯ ಮತ್ತು ತುರ್ತು ವಿಭಾಗಗಳಲ್ಲಿ ಫಲಾನುಭವಿಗಳನ್ನು ನೋಂದಾಯಿಸಬೇಕು. ದಾನಿಯ ಅಂಗಾಂಗಗಳ ಬಗ್ಗೆ ಸಲಹೆ ನೀಡಬೇಕು. ಅಂಗಾಂಗ ಹಂಚಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನೂ ಪರಿಹರಿಸಬೇಕು. ಕನಿಷ್ಠ ದಾನಿಗಳನ್ನು ಗುರುತಿಸಿ ವರ್ಗೀಕರಿಸಬೇಕು. ಆಯ್ದ ಸಂದರ್ಭಗಳಲ್ಲಿ ರಾಜ್ಯದ ಇತರೆ ವಲಯಗಳಿಗೆ ಅಂಗಾಂಗ ಹಂಚಿಕೆ ಶಿಾರಸು ಮಾಡಬೇಕು. ಮಿದುಳು ನಿಷ್ಕ್ರಿಯ ಘೋಷಣೆ ಪ್ರಕ್ರಿಯೆಯಲ್ಲಿ ಸಲಹೆ ಮತ್ತು ಸಹಕಾರ ಒದಗಿಸಬೇಕು. ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ಸದಸ್ಯ ಕಾರ್ಯದರ್ಶಿ ಅವರಿಗೆ ಸೂಕ್ತ ಶಿಫಾರಸುಗಳನ್ನು ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದೆ.

ಯಾವ ಸಮಿತಿಗೆ ಯಾರ‌್ಯಾರು ಸದಸ್ಯರು?

* ಮೂತ್ರಪಿಂಡ: ಡಾ. ಸಿ.ಜಿ. ಶ್ರೀಧರ್, ಡಾ. ಎಲ್. ಉಮೇಶ್, ಡಾ. ಎಸ್. ಕಿಶೋರ್ ಬಾಬು, ಡಾ. ಬಿ.ಟಿ. ಅನಿಲ್ ಕುಮಾರ್, ಡಾ.ಸಂತೋಷ್ ಪೈ, ಡಾ. ಮಂಜುನಾಥ್ ಎಸ್. ಶೆಟ್ಟಿ

* ಯಕೃತ್: ಡಾ. ಸಿ.ಎಸ್. ಶುಶ್ರುತ, ಡಾ. ಜಯಂತ ರೆಡ್ಡಿ, ಡಾ.ಎಸ್.ಕೆ. ರವಿಕಿರಣ, ಡಾ.ಎಸ್. ರೋಮೆಲ್.

* ಶ್ವಾಸಕೋಶ: ಡಾ. ಬಾಷಾ ಜೆ. ಖಾನ್, ಡಾ.ಪ್ರಕಾಶ್ ಎಂ. ಲುಧಾನಿ, ಡಾ.ಸೈಯದ್ ಜುಲ್ಬಾಮೈನ್ ತೌಶೀದ್

* ಹೃದಯ: ಡಾ. ಅದಿತಿ ಸಿಂಘ್ವಿ, ಡಾ.ಪ್ರಸನ್ನ ಸಿಂಹ ಮೋಹನ್ ರಾವ್, ಡಾ.ಶಶಿರಾಜ್, ಡಾ. ಅಶೋಕ್ ಕುಮಾರ್.

* ಮಿದುಳು ನಿಷ್ಕ್ರಿಯ: ಡಾ.ಚಿನ್ನದೊರೈ, ಡಾ. ಟಿ.ಆರ್. ಚಂದ್ರಶೇಖರ್, ಡಾ. ಆರ್. ನಾಗೇಶ್, ಡಾ. ಕಾರ್ತಿಕ್ ಲಕ್ಷ್ಮೀಕಾಂತ್, ಡಾ. ಎಂ.ಎಸ್. ರಾಮಕೃಷ್ಣ, ಡಾ. ಗಗನ್ ಬ್ರಾರ್.

* ರೋಗನಿರೋಧಕ ಮತ್ತು ರೋಗವಿಜ್ಞಾನ: ಡಾ.ಅದಿತಿ ಸಿಂಘ್ವಿ, ಡಾ.ಅಂಕಿತ್ ಮಾಥುರ್, ಡಾ. ಮೊಹಮ್ಮದ್ ಫಹಾದ್ ಖಾನ್

* ಸಾಂಕ್ರಾಮಿಕ ರೋಗ: ಡಾ. ನೇಹಾ ಮಿಶ್ರಾ, ಡಾ. ಸ್ವಾತಿ ರಾಜಗೋಪಾಲ್ ಮತ್ತು ಡಾ. ಸವಿತಾ ಸೆಬಾಸ್ಟಿಯನ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net