ಅಕ್ರಮ ಟವರ್ ತನಿಖೆಗೆ ಆದೇಶ: ಕ್ರಮದ ವರದಿಗೆ ತಿಂಗಳ ಗಡುವು

Tower
Published on

ಬೆಂಗಳೂರು: ರಾಜ್ಯದ ಗಲ್ಲಿ ಗಲ್ಲಿಗಳಲ್ಲಿ ತಲೆ ಎತ್ತಿರುವ ಅಕ್ರಮ ಮೊಬೈಲ್ ಟವರ್​ಗಳ ವಿಚಾರದಲ್ಲಿ ಕೊನೆಗೂ ಸರ್ಕಾರ ಕಣ್ತೆರೆದಿದೆ. ರಾಜ್ಯದಲ್ಲಿರುವ ಒಟ್ಟಾರೆ ಅಧಿಕೃತ ಹಾಗೂ ಅನಧಿಕೃತ ಟವರ್​ಗಳ ಮಾಹಿತಿ ಹಾಗೂ ಅಕ್ರಮ ಟವರ್​ಗಳ ವಿರುದ್ಧ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ತಿಂಗಳೊಳಗೆ ವರದಿ ಸಲ್ಲಿಸಲು ಪೌರಾಡಳಿತ ನಿರ್ದೇಶನಾಲಯಕ್ಕೆ ಆದೇಶಿಸಿದೆ.

ಅನಧಿಕೃತ ಟವರ್​ಗಳ ಕುರಿತಂತೆ ‘ಶೇ.82 ಟವರ್ ಅಕ್ರಮ’ ಶೀರ್ಷಿಕೆಯಡಿ ಅ.31ರಂದು ವಿಜಯವಾಣಿ ಮುಖಪುಟದಲ್ಲಿ ವಿಶೇಷ ವರದಿ ಪ್ರಕಟಗೊಂಡ ಬೆನ್ನಲ್ಲೇ ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಬಸವರಾಜ್ ಈ ಆದೇಶ ಹೊರಡಿಸಿದ್ದಾರೆ. ‘ರಾಜ್ಯದಲ್ಲಿ ಎಷ್ಟು ಅಧಿಕೃತ, ಅನಧಿಕೃತ ಖಾಸಗಿ ಟವರ್​ಗಳಿವೆ ಎಂಬುದರ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ, ಕಾನೂನು ರೀತಿಯಲ್ಲಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ತಿಂಗಳೊಳಗೆ ಸಮಗ್ರ ವರದಿ ಸಲ್ಲಿಸಬೇಕು’ಎಂದು ಸಚಿವರು ಸೂಚಿಸಿದ್ದಾರೆ.

ಪತ್ರಿಕೆಯ ವರದಿ ಗಮನಕ್ಕೆ ಬಂದಿದೆಯೇ? ಖಾಸಗಿ ಮೊಬೈಲ್ ಟವರ್ ಅಳವಡಿಕೆಗೆ ಪೌರಾಡಳಿತ ನಿರ್ದೇಶನಾಲಯದ ಅನುಮತಿ ಕಡ್ಡಾಯ ಎಂಬ ಆದೇಶ ಇದ್ದರೂ ಹೇಗೆ ಅನಧಿಕೃತ ಟವರ್ ತಲೆ ಎತ್ತಿವೆ ಎಂದು ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net