More

    ಶೇ.82 ಟವರ್ ಅಕ್ರಮ: ರಾಜ್ಯದಲ್ಲಿವೆ ಅನುಮತಿ ರಹಿತ 3,805 ಮೊಬೈಲ್ ಸ್ತಂಭ!

    | ಹರೀಶ ಬೇಲೂರು ಬೆಂಗಳೂರು

    ಈ ಮುಂಚೆ ಊರಿಗೊಂದು ಎಂಬಂತಿರುತ್ತಿದ್ದ ಮೊಬೈಲ್ ಟವರ್​ಗಳು ಈಗ ಸ್ಥಳೀಯಾಡಳಿತಗಳು ಮತ್ತು ಸರ್ಕಾರದ ನಿರ್ಲಕ್ಷ್ಯದಿಂದಾಗಿ ರಸ್ತೆಗೊಂದು ಎಂಬಂತೆ ತಲೆಯೆತ್ತಿವೆ! ಕಟ್ಟಡ ಸಾಮರ್ಥ್ಯ ಪರೀಕ್ಷಿಸದೆ, ಸಾರ್ವಜನಿಕರಿಗೆ ಅಪಾಯ ವಿಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳದೆಯೇ ರಾಜ್ಯ ದಲ್ಲಿ 3805 ಅನಧಿಕೃತ ಟವರ್​ಗಳನ್ನು ನಿರ್ವಿುಸ ಲಾಗಿದೆ. ಇವುಗಳ ಜತೆ 651 ಅಧಿಕೃತ ಟೆಲಿಕಾಂ ಟವರ್​ಗಳು ಕೂಡ ತೆರಿಗೆ ಪಾವತಿಸದಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂ. ಖೋತಾ ಆಗಿದೆ.

    ಜಾಣಕುರುಡು: ಪೌರಾಡಳಿತ ಇಲಾಖೆಯಿಂದ ಅನುಮತಿ ಪಡೆಯದೆ, ಕಟ್ಟಡ ಸಾಮರ್ಥ್ಯ ಪರೀಕ್ಷೆಯನ್ನೂ ನಡೆಸದೆ ಸ್ಥಾಪನೆಯಾಗುತ್ತಿರುವ ಮೊಬೈಲ್ ಟವರ್​ಗಳು ಅಪಾಯಕಾರಿಯಾಗಿದ್ದರೂ ಸ್ಥಳೀಯ ಸಂಸ್ಥೆಗಳು ಜಾಣಕುರುಡು ಪ್ರದರ್ಶಿಸುತ್ತಿವೆ. ಅನಧಿಕೃತ ಟವರ್ ನಿರ್ವಿುಸುವ ಕಂಪನಿ ಗಳಿಗೆ ಬಾಡಿಗೆಯೇ ಬಂಡವಾಳವಾಗಿರುತ್ತದೆ. ಜನನಿಬಿಡ ಪ್ರದೇಶಗಳಲ್ಲಿ ಹಣದ ಆಸೆ ತೋರಿಸಿ ಮನೆ ಮಾಲೀಕರನ್ನು ಒಪ್ಪಿಸಿ ಟವರ್ ನಿರ್ವಿುಸುವ ಕಂಪನಿಗಳು ಮಾಸಿಕ -ಠಿ;30-35 ಸಾವಿರ ಬಾಡಿಗೆ ಕೊಡುತ್ತವೆ. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ತಿಂಗಳಿಗೆ -ಠಿ;25 ಸಾವಿರ ವರೆಗೆ ಬಾಡಿಗೆ ಇದೆ.

    ತೆರಿಗೆ ಕಡಿಮೆ: ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಬರುವ ಜಮೀನು, ಮನೆಗಳ ಮೇಲೆ ಹಾಗೂ ಖಾಲಿ ನಿವೇಶನದಲ್ಲಿ ನಿರ್ವಿುಸಿರುವ ಟವರ್​ಗೆ ವರ್ಷಕ್ಕೆ 10 ಸಾವಿರ ರೂ., ಮಹಾನಗರ ಪಾಲಿಕೆ ವ್ಯಾಪಿಯಲ್ಲಿ 15 ಸಾವಿರ ರೂ. ತೆರಿಗೆ ನಿಗದಿ ಮಾಡಲಾಗಿದೆ. ಆದರೆ ಮನೆ ಮಾಲೀಕರಿಗೆ ಬರುವ ಪ್ರತಿ ತಿಂಗಳ ಬಾಡಿಗೆ ಪರಿಗಣಿಸಿದರೆ ಈ ಮೊತ್ತ ಕಡಿಮೆ ಎಂಬ ವಾದವೂ ಇದೆ.

    ಯಾವುದಕ್ಕೆ ಅವಕಾಶ?

    ಕರ್ನಾಟಕ ದೂರಸಂಪರ್ಕ ಮೂಲಸೌಕರ್ಯ ಗೋಪುರ ನಿಯಂತ್ರಣ 2015- ಪ್ರಕಾರ ನಗರ ಪ್ರದೇಶಗಳಲ್ಲಿ ಮನೆಗಳ ಮೇಲೆ, ಖಾಲಿ ನಿವೇಶನ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ರೈತರ ಜಮೀನಿನಲ್ಲಿ ಟೆಲಿಕಾಂ ಸಂಸ್ಥೆಗಳು ಮೊಬೈಲ್ ನೆಟ್​ವರ್ಕ್​ಗಾಗಿ ಟವರ್​ಗಳನ್ನು ನಿರ್ವಿುಸಬಹುದು. ಟೆಲಿಕಮ್ಯುನಿಕೇಷನ್ ಇನ್ಪಾ›ಸ್ಟ್ರಕ್ಚರ್ ಟವರ್ಸ್​ನಡಿ (ಟಿಐಟಿ) ಗ್ರೌಂಡ್ ಬೇಸ್ಡ್ ಟವರ್ಸ್(ಜಿಬಿಟಿ), ರೂಫ್ ಟಾಪ್ ಟವರ್(ಆರ್​ಟಿಟಿ), ರೂಫ್ ಟಾಪ್ ಪೋಲ್ಸ್(ಆರ್​ಟಿಪಿ), ಸೆಲ್​ಪೋನ್ ಟವರ್(ಸಿಪಿಟಿ), ಆಂಟೆನಾ ಫಿಕ್ಸ್​ರ್ಸ್ ಮತ್ತಿತರ ಟವರ್​ಗಳಿಗೆ ಅನುಮತಿ ಇದೆ.

    ಮಾಲೀಕರಿಂದಲೂ ಧೋಖಾ: ಮನೆಗಳ ಮೇಲೆ ಟವರ್ ನಿರ್ವಣಕ್ಕೆ ಬಾಡಿಗೆ ಪಡೆಯುವ ಮಾಲೀಕರು ಸಹ ಸರ್ಕಾರಕ್ಕೆ ತೆರಿಗೆ ಪಾವತಿಸಬೇಕು. ಆದರೆ ಅನೇಕರು ತೆರಿಗೆ ಕಟ್ಟದೆ ವಂಚಿಸಿರುವ ಆರೋಪಗಳಿವೆ.

    ಇವು ಕಡ್ಡಾಯ

    ಮೊಬೈಲ್ ಟವರ್ ಸ್ಥಾಪನೆಗೆ ಸಾಮಾನ್ಯ ಮಾರ್ಗಸೂಚಿ, ಸ್ಥಳ, ನಿವೇಶನ ರಚನೆ, ಅನುಮೋದಿತ ಯೋಜನೆ ಹಾಗೂ ಮಾಲೀಕತ್ವ ಪ್ರತಿ ಜತೆಗೆ ರಚನಾತ್ಮಕ ಸ್ಥಿರತೆ ಪ್ರಮಾಣ ಪತ್ರ, ಗುತ್ತಿಗೆ ಒಪ್ಪಂದ, ವಾಸದ ಪ್ರಮಾಣ ಪತ್ರ, ಟವರ್ ವಿಸ್ತೀರ್ಣ, ಸಿಡಿಲು ನಿರೋಧಕ ತಂತ್ರಜ್ಞಾನ ಅಳವಡಿಕೆ, ಅಗ್ನಿಶಾಮಕ ಇಲಾಖೆ ಪ್ರಮಾಣಪತ್ರ ಬೇಕು

    ಶೇ.82 ಟವರ್ ಅಕ್ರಮ: ರಾಜ್ಯದಲ್ಲಿವೆ ಅನುಮತಿ ರಹಿತ 3,805 ಮೊಬೈಲ್ ಸ್ತಂಭ!

    ಅಪಾಯ ಹೇಗೆ?

    ಹವಾಮಾನ ವೈಪರೀತ್ಯ ಸಂದರ್ಭದಲ್ಲಿ ವೈರ್​ಗಳು ತುಂಡಾಗಿ ಬೀಳುವ ಸಾಧ್ಯತೆ ಇರುವುದರಿಂದ ವಿದ್ಯುತ್ ಪ್ರವಹಿಸಿ ಸಾವು-ನೋವು ಸಂಭವಿಸಬಹುದು. ಕಟ್ಟಡದ ಸಾಮರ್ಥ್ಯ ಮೀರಿ ಹೆಚ್ಚಿನ ಭಾರದ ಟವರ್ ನಿರ್ವಿುಸಿದರೆ ಅವಘಢ ಸಂಭವಿಸುವ ಸಾಧ್ಯತೆ ಇದೆ.

    ಏನೇನು ಉಲ್ಲಂಘನೆ?: ನಗರಾಭಿವೃದ್ಧಿ ಇಲಾಖೆ ಅಧೀನದ ಪೌರಾಡಳಿತ ಇಲಾಖೆಯಿಂದ ಅನುಮತಿ ಪಡೆದಿಲ್ಲ, ಕಟ್ಟಡ ಸಾಮರ್ಥ್ಯ ಪರೀಕ್ಷೆ ನಡೆಸಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts