

ಕೊಕ್ಕಡ: ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಪೆರಿಯಶಾಂತಿ, ಪಾರ್ಪಿಕಲ್ಲು, ನಿಡ್ಲೆ, ಕುದ್ರಾಯ ತನಕ ಮೀಸಲು ಅರಣ್ಯ ಪ್ರದೇಶದಲ್ಲಿರುವ ಅನಧಿಕೃತ ಗೂಡಂಗಡಿಗಳನ್ನು ಕೂಡಲೇ ಒಳಗೆ ತೆರವುಗೊಳಿಸುವಂತೆ ಅರಣ್ಯ ಅಧಿಕಾರಿಗಳು ಶುಕ್ರವಾರ ಮೌಖಿಕ ಆದೇಶ ಹೊರಡಿಸಿದ್ದಾರೆ.
ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ. ಜುಲೈ 15ರ ಒಳಗೆ ತೆರವುಗೊಳಿಸುವುದಾಗಿ ಗೂಡಂಗಡಿ ವ್ಯಾಪಾರಸ್ಥರು ಮನವಿ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಎಸಿಎಫ್ ಹಸ್ತಾ ಶೆಟ್ಟಿ, ಉಪ್ಪಿನಂಗಡಿ ವಲಯ ಅರಣ್ಯ ಅಧಿಕಾರಿ ರಾವೇಂದ್ರ, ಉಪವಲಯ ಅರಣ್ಯ ಅಧಿಕಾರಿಗಳಾದ ಶಿವಾನಂದ, ಭವಾನಿ ಶಂಕರ್, ಕೌಕ್ರಾಡಿ ಪಂಚಾಯಿತಿ ಅಧ್ಯಕ್ಷ ಉದಯಕುಮಾರ್, ಪಿಡಿಒ ದೇವಕಿ, ಸದಸ್ಯ ಮಹೇಶ್, ಗಸ್ತು ಅರಣ್ಯ ಪಾಲಕರಾದ ದಿವಾಕರ ರೈ, ಸುನೀಲ್, ನೌಕರ ದಿನೇಶ್ ಮೊದಲಾದವರಿದ್ದರು.