

ತುಮಕೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ವಿಪಕ್ಷಗಳ ಪ್ರತಿಭಟನೆ "ಗುಮ್ಮ'ದಿಂದಾಗಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಸೋಮವಾರ ನಗರದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕಸ್ಥಾಪನೆ, ಸವಲತ್ತು ವಿತರಣೆ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಚಾಲನೆ ನೀಡಲಿದ್ದು ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, 3 ಎಎಸ್ಪಿ, 12 ಡಿಎಸ್ಪಿ, 50 ಸಿಪಿಐ, 109 ಪಿಎಸ್ಐ, 189 ಎಎಸ್ಐ, 80 ಮಹಿಳಾ ಪೇದೆಗಳು, 5 ಡಿಎಆರ್, 5 ಕೆಎಸ್ಆರ್ಪಿ ತುಕಡಿ ಸೇರಿದಂತೆ 1290 ಪೊಲೀಸರನ್ನು ಹಾಗೂ 115 ಗೃಹರಕ್ಷದಳ ಸಿಬ್ಬಂದಿಯನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ.
ಜಿಲ್ಲೆಯಲ್ಲದೆ ನೆರಯ ಕೋಲಾರ, ಬೆಂಗಳೂರು, ಚಿಕ್ಕಬಳ್ಳಾಪುರ, ಕೆಜಿಎ್ನಿಂದ ಸಹ ಪೊಲೀಸರನ್ನು ಭದ್ರತೆಗೆ ಕರೆಸಲಾಗಿದ್ದು ಭಾನುವಾರ ಸಂಜೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಬೆಳ್ಳಾವಿಗೆ ಹೆಲಿಕ್ಯಾಪ್ಟರ್ನಲ್ಲಿ ಬಂದಿಳಿಯುವ ಸಿಎಂ ಅಲ್ಲಿಂದ ರಸ್ತೆ ಮಾರ್ಗವಾಗಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸಲಿದ್ದಾರೆ. ನಂತರ ತುಮಕೂರು ವಿವಿ ಹೆಲಿಪ್ಯಾಡ್ನಿಂದ ಬೆಂಗಳೂರಿನತ್ತ ಪಯಣ ಬೆಳೆಸುವರು. ಎಲ್ಲಿಯೂ ಸಣ್ಣಲೋಪ, ಕಾನೂನುಭಂಗಕ್ಕೆ ಅವಕಾಶವಾಗದಂತೆ ಪೊಲೀಸರು ಎಚ್ಚರಿಕೆವಹಿಸಿದ್ದಾರೆ.