ಆಪರೇಷನ್​ ಸಿಂಧೂರ ಕಾರ್ಯಾಚರಣೆ ಯಶಸ್ವಿ

IRANNA KADADI new
Published on

ಮೂಡಲಗಿ: ಪಾಕಿಸ್ತಾನದ ಉಗ್ರರ ನೆಲೆಗಳನ್ನು ಪತ್ತೆ ಹಚ್ಚಿ ನಿಖರವಾಗಿ ಅವುಗಳನ್ನೇ ಧ್ವಂಸ ಮಾಡಿದ ಆಪರೇಷನ್​ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ತಾಲೂಕಿನ ರಾಜಾಪುರ ಗ್ರಾಮದ ಚುನಿಮಟ್ಟಿಯ ಶಕ್ತಿದೇವತೆಯಾದ ಚೂನಮ್ಮದೇವಿ ಹಾಗೂ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ಈಚೆಗೆ ಏರ್ಪಡಿಸಿದ್ದ ನಗೆಹಬ್ಬ ಸಾಂಸತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜಾಪುರ ಗ್ರಾಮದ ಜಾತ್ರೆ ಮಾದರಿಯಾಗಿದೆ. ರೆತರಿಗೆ ಸಂಬಂಧಪಟ್ಟಂತಹ ಕಷಿಮೇಳ ಆಯೋಜಿಸುವುದು ಅಗತ್ಯ ಎಂದರು.

ರಾಜ್ಯಸಭಾ ಸದಸ್ಯರ ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆ ಅನುದಾನದಲ್ಲಿ ಚೂನಮ್ಮದೇವಿ ದೇವಸ್ಥಾನದ ಬಳಿ ಸಮುದಾಯ ಭವನ ನಿರ್ಮಾಣಕ್ಕೆ 25 ಲ ರೂ. ಹಾಗೂ ಮುಜರಾಯಿ ಇಲಾಖೆಯಿಂದ 5 ಲ ರೂ. ಮಂಜೂರಾತಿಯಾಗಿದೆ ಎಂದರು.

ಮುಖಂಡರಾದ ವಿಠ್ಠಲ ಪಾಟೀಲ, ಬೆರು ಯಕ್ಕುಂಡಿ, ರಾಜು ಬೆರುಗೋಳ, ರಾಮಚಂದ್ರ ಪಾಟೀಲ, ಬಸವರಾಜ ಪಂಡ್ರೋಳಿ, ಶಿವಾನಂದ ಕಮತಿ, ರಾಜು ಪವಾರ, ಕೆಂಪಣ್ಣ ಗಡಹಿಂಗ್ಲೆಜ್​, ಸಿದ್ದಪ್ಪ ಜೆಟ್ಟೆನ್ನವರ ಗ್ರಾಪಂ ಅಧ್ಯೆ ರೇಣುಕಾ ಕಮತಿ, ರಾಮಚಂದ್ರ ಕೊಡ್ಲಿ, ಬಸವರಾಜ ಹೊಸುರ, ಶಿವಪುತ್ರ ಗುಂಡಪ್ಪಗೋಳ, ಶ್ರೀನಾಥ ಬೆರುಗೋಳ, ವಿಠ್ಠಲ ಸಿಂಗಾರಿ, ಸಿದ್ದು ಯಕ್ಕುಂಡಿ, ಸುಭಾಸ ಎಣ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net