

* ಅರಣ್ಯ ಇಲಾಖೆ ತಂಡಗಳಿಗೆ ದಾರಿ ತಪ್ಪಿಸಿದ ಸಲಗಗಳು
ರಾಮನಗರ
ಜಿಲ್ಲೆಯ ಅರಣ್ಯ ಪ್ರದೇಶದಲ್ಲಿರುವ ಆನೆಗಳ ಕಾರ್ಯಾಚರಣೆಗೆ ಇಳಿದಿರುವ ಅರಣ್ಯ ಇಲಾಖೆ ಮಂಗಳವಾರ ಚಿಕ್ಕಮಣ್ಣುಗುಡ್ಡೆ ಹಂದಿಗೊಂದಿ ಅರಣ್ಯ ಪ್ರದೇಶದಿಂದ ಕಾರ್ಯಾಚರಣೆ ಮಾಡಿದರು.
ತೆಂಗಿನಕಲ್ಲು ಅರಣ್ಯದಿಂದ ಮಂಗಳವಾರ ಸಂಜೆಯಿಂದ ಕಾರ್ಯಾಚರಣೆ ಬೃಹತ್ ಪ್ರಮಾಣದಲ್ಲಿ ಪ್ರಾರಂಭವಾಗಬೇಕಿತ್ತು. ಎಲ್ಲ ಸಿದ್ಧತೆ ಅರಣ್ಯ ಇಲಾಖೆ ಮಾಡಿಕೊಂಡಿತ್ತು.
ಆದರೆ, ಹಂದಿಗೊಂದಿ ಅರಣ್ಯದಲ್ಲಿ 3 ಚಿಕ್ಕಮಣ್ಣುಗುಡ್ಡೆ ಅರಣ್ಯದಲ್ಲಿ 2 ಆನೆಗಳು ಸೋಮವಾರದ ಕಾರ್ಯಾಚರಣೆಯಲ್ಲಿ ತೆಂಗಿನಕಲ್ಲು ಅರಣ್ಯದತ್ತ ಸಾಗಿದ್ದವು. ಆದರೆ, ಚಿಕ್ಕಮಣ್ಣುಗುಡ್ಡೆ ಅರಣ್ಯದಿಂದ ಹೋದ ಎರಡು ಆನೆಗಳ ತೆ ಮತ್ತೆರಡು ಆನೆಗಳು ತೆಯಲ್ಲಿ ವಾಪಸ್ ಇದೇ ಅರಣ್ಯ ಪ್ರದೇಶಕ್ಕೆ ಬಂದು ಸೇರಿದ್ದವು.
ಹಂದಿಗೊಂದಿ ಅರಣ್ಯ ಪ್ರದೇಶದ ಕೇತೋಹಳ್ಳಿ ಭಾಗದಿಂದ ಒಂದು ತಂಡ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದ ದೇವರದೊಡ್ಡಿ ತಿಮ್ಮಯ್ಯನದೊಡ್ಡಿ ಭಾಗದಿಂದ ಒಂದು ತಂಡಗಳು ತೆಂಗಿನಕಲ್ಲು ಅರಣ್ಯಕ್ಕೆ ಆನೆಗಳನ್ನು ಹಿಮ್ಮೆಟ್ಟಿಸಲು ಕಾರ್ಯಾಚರಣೆಗೆ ಇಳಿದಿವೆ.
ಮಂಗಳವಾರ ರಾತ್ರಿ ಎರಡೂ ತಂಡಗಳು ಚಿಕ್ಕಮಣ್ಣುಗುಡ್ಡೆ ಹಂದಿಗೊಂದಿ ಅರಣ್ಯದಲ್ಲಿರುವ ಆನೆಗಳನ್ನು ತೆಂಗಿನಕಲ್ಲು ಅರಣ್ಯದತ್ತ ಸೇರಿಸಲು ಮುಂದಾಗಿವೆ. ತಂಡಗಳ ಕಾರ್ಯಾಚರಣೆ ಯಶಸ್ವಿಯಾದರೆ ಬುಧವಾರ ಸಂಜೆ ತೆಂಗಿನಕಲ್ಲು ಅರಣ್ಯದಲ್ಲಿ ಕಾರ್ಯಾಚರಣೆ ಮುಂದುವರಿಯುತ್ತದೆ ಎನ್ನಲಾಗಿದೆ.
ಕಾರ್ಯಾಚರಣೆಯಲ್ಲಿ ಹೋಗುತ್ತಿರುವ ಆನೆಗಳು ಕತ್ತಲಿನಲ್ಲಿ ಮತ್ತೆ ತಂಡಗಳಿಗೆ ದಾರಿ ತಪ್ಪಿಸಿ ಬೇರೊಂದು ದಾರಿಯಲ್ಲಿ ಮತ್ತೆ ಅದೇ ಅರಣ್ಯಕ್ಕೆ ಬರುತ್ತಿರುವುದು ಅರಣ್ಯ ಇಲಾಖೆಯನ್ನು ಚಿಂತೆಗೀಡುಮಾಡಿದೆ. ಮಂಗಳವಾರ ಮಧ್ಯಾಹ್ನದಿಂದಲೇ ಎರಡು ತಂಡಗಳು ಕಾರ್ಯಾಚರಣೆಗೆ ಇಳಿಯಲಿದ್ದು, ಬೆಳಕಿನ ಸಮಯದಲ್ಲೇ ತೆಂಗಿನಕಲ್ಲು ಅರಣ್ಯದತ್ತ ಆನೆಗಳನ್ನು ಸಾಗಿಸಲು ಮುಂದಾಗಿದೆ.
ಕಣ್ಗಾವಲು : ಹಂದಿಗೊಂದಿ ಚಿಕ್ಕಮಣ್ಣುಗುಡ್ಡೆಗೆ ಆನೆಗಳು ತೆಂಗಿನಕಲ್ಲು ಅರಣ್ಯದಿಂದ ಬರಬೇಕಾದರೆ ಎರಡು, ಮೂರು ದಾರಿಗಳಲ್ಲಿ ಬರುತ್ತಿವೆ ಅರಣ್ಯ ಇಲಾಖೆ ಉಪಾಯ ಹುಡುಕಿ ರಾತ್ರಿ ವೇಳೆ ಬರುವ ಜಾಗ ಗುರುತಿಸಿಕೊಂಡು ವಾಪಸ್ ಬರದಂತೆ ತಂಡಗಳ ಮುಖಾಂತರ ರಾತ್ರಿ ತಂಡಗಳ ಮುಖಾಂತರ ಕಣ್ಗಾವಲಿರಿಸಿದೆ.
ಸೋಮವಾರವೇ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲಿದ್ದ ಆನೆಗಳನ್ನು ತೆಂಗಿನಕಲ್ಲು ಅರಣ್ಯ ಸೇರಿಸಲಾಗಿತ್ತು. ಆದರೆ ಅವು ಹೋದ ದಾರಿಯಲ್ಲಿ ಬರದೆ ಬೇರೆ ದಾರಿ ಮೂಲಕ ಮತ್ತೆ ಎರಡು ಆನೆಗಳ ಜತೆಗೂಡಿ ಚಿಕ್ಕಮಣ್ಣುಗುಡ್ಡೆಗೆ ಬಂದಿವೆ. ಮಂಗಳವಾರ ಮಧ್ಯಾಹ್ನದಿಂದಲೇ ಅವುಗಳ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಕಾರ್ಯಾಚರಣೆ ಯಶಸ್ವಿಯಾಗುವ ಭರವಸೆ ಇದೆ.
ಮಲ್ಲೇಶ್, ವಲಯ ಅರಣ್ಯಾಧಿಕಾರಿ, ಚನ್ನಪಟ್ಟಣ.