

ಹೆಬ್ರಿ: ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸುವರ್ಣ ಸಂಭ್ರಮದ ಹೆಬ್ರಿ ಗಣೆೇಶೋತ್ಸವದ ಅಂಗವಾಗಿ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಯೋಗದೊಂದಿಗೆ ಹೆಬ್ರಿ ಪ್ರಥಮ ದರ್ಜೆ ಕಾಲೇಜು ಒಳಾಂಗಣದಲ್ಲಿ ಮುಕ್ತ ವ್ಯಾಟ್ ಕಬಡ್ಡಿ ನಡೆಯಿತು.
ಹೆಬ್ರಿ ಪಿಎಸ್ಐ ರವಿ ಬಿ.ಕೆ.,ಸರ್ಕಾರಿ ಪ್ರಥಮ ಕಾಲೇಜು ಪ್ರಾಂಶುಪಾಲ ಡಾ.ವಿದ್ಯಾಧರ್ ಹೆಗ್ಡೆ ಉದ್ಘಾಟಿಸಿದರು. ಸಮಿತಿ ಅಧ್ಯಕ್ಷ ಜನಾರ್ದನ್ ಎಚ್. ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರಾಜೇಶ್ ಆಚಾರ್ಯ, ಕ್ರೀಡಾ ಸಂಚಾಲಕ ಕರುಣಾಕರ ಸೇರಿಗಾರ್, ನಿವೃತ್ತ ಪ್ರಾಂಶುಪಾಲ ವಾಸುದೇವ ಭಟ್, ಪ್ರಮುಖರಾದ ಡಾ.ಮನೋಜ್ ಕುವಾರ್, ಭರತ್ ಮುನಿಯಾಲ್ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಅಮೆಚೂರ್ ಕಬಡ್ಡಿ ಜಿಲ್ಲಾಧ್ಯಕ್ಷ ದಿನೇಶ್ ಪುತ್ರನ್, ಕಾರ್ಯದರ್ಶಿ ಪ್ರಾಣೆೇಶ್ ಎಸ್.ಕೆ., ಹೆಬ್ರಿ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಗೌರವಾಧ್ಯಕ್ಷ ಪ್ರವೀಣ್ ಬಲ್ಲಾಳ್, ಅಧ್ಯಕ್ಷ ಹಷರ್ ಶೆಟ್ಟಿ ಬೆಳಂಜೆೆ, ಪ್ರಮುಖರಾದ ವಾದಿರಾಜ ಶೆಟ್ಟಿ, ದಿವಾಕರ್ ಶೆಟ್ಟಿ, ವಸಂತ್ ಶೆಟ್ಟಿ ನಡುಬೀಡು, ಅರುಣ್ ಹೆಗ್ಡೆ, ಪ್ರಕಾಶ್ ಶೆಟ್ಟಿ ಕಲ್ಲಿಲ್ಲು, ಟಿ.ಜಿ.ಆಚಾರ್ಯ ಪ್ರವೀಣ್ ಕುವಾರ್, ಸುದೀಪ್ ಭಟ್, ಶಂಕರ ಸೇರಿಗಾರ್, ಸಂತೋಷ್ ನಾಯಕ್ ಉಪಸ್ಥಿತರಿದ್ದರು. ಪ್ರಸಾದ್ ಶೆಟ್ಟಿ ನಿರ್ವಹಿಸಿದರು.