

ಕೋಟ: ಬಾಳ್ಕುದ್ರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ 50ನೇ ವರ್ಷದ ಪ್ರಯುಕ್ತ ಸರ್ವೋದಯ ಯುವಕ ಮಂಡಲ ಹಾಗೂ ಮಹಿಳಾ ಮಂಡಳದ ಸಂಯುಕ್ತ ಆಶ್ರಯದಲ್ಲಿ ಚೌತಿ ಗಮ್ಮತ್- 2025 ಕ್ರೀಡಾಕೂಟ ಬಾಳ್ಕುದ್ರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ನಡೆಯಿತು.
ನಿವೃತ್ತ ಮುಖ್ಯಶಿಕ್ಷಕಿ ಶಶಿಕಲಾ ಕ್ರೀಡಾಕೂಟವನ್ನು ಉದ್ಘಾಟಿಸಿದರು. ನಿವೃತ್ತ ಮುಖ್ಯಶಿಕ್ಷಕಿ ಶಶಿಕಲಾ ಹಾಗೂ ದೇವಕಿ ರಂಗ ವಾಸ್ಟರ್ ಅವರನ್ನು ಸನ್ಮಾನಿಸಲಾಯಿತು.
ಐರೋಡಿ ಗ್ರಾಮ ಪಂಚಾಯಿತಿ ಸದಸ್ಯ ಸುಬ್ರಹ್ಮಣ್ಯ ಆಚಾರ್ಯ, ನಾರಾಯಣ ಗುರು ಬಿಲ್ಲವ ಸಂ ಅಧ್ಯಕ್ಷ ವಿಜಯ್ ಪೂಜಾರಿ, ಗಣೇಶೋತ್ಸವ ಸಮಿತಿ ಅಧ್ಯಕ್ಷ ನಾಗರಾಜ ದೇವಾಡಿಗ , ಸರ್ವೋದಯ ಯುವಕ ಮಂಡಲ ಅಧ್ಯಕ್ಷ ವಿಜೇತ ದೇವಾಡಿಗ ಹಾಗೂ ಮಹಿಳಾ ಮಂಡಲ ಅಧ್ಯಕ್ಷೆ ರೇಖಾ ಪಿ.ಸುವರ್ಣ ಹಾಗೂ ವಿವಿಧ ಸಂದ ಸದಸ್ಯರು ಉಪಸ್ಥಿತರಿದ್ದರು. ಬಾಳ್ಕುದ್ರು ಶಾಲಾ ದೈಹಿಕ ಶಿಕ್ಷಕ ಶ್ರೀಕಾಂತ್ ಸಾಮಂತ್ ನಿರೂಪಿಸಿ, ವಂದಿಸಿದರು.