ಮುಕ್ತ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ

HBR (7)
Published on

ಹೆಬ್ರಿ: ಹೆಬ್ರಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸುವರ್ಣ ಸಂಭ್ರಮದ ಗಣೆೇಶೋತ್ಸವದ ಪ್ರಯುಕ್ತ ನಡೆದ ಮುಕ್ತ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವನ್ನು ಸಮಿತಿ ಉಪಾಧ್ಯಕ್ಷ ಎಚ್.ಪ್ರಕಾಶ್ ಮಲ್ಯ ಉದ್ಘಾಟಿಸಿದರು.

ಗಣೆೇಶೋತ್ಸವ ಸಮಿತಿ ಅಧ್ಯಕ್ಷ ಜನಾರ್ದನ ಎಚ್. ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾ ಸಂಚಾಲಕ ಕರುಣಾಕರ ಶೇರಿಗಾರ್, ಉಪಾಧ್ಯಕ್ಷ ದಿವಾಕರ್ ಶೆಟ್ಟಿ ಸೀತಾನದಿ, ದಾನಿ ಅಶೋಕ್ ಹೆಗ್ಡೆ, ಪ್ರಮುಖರಾದ ಸಂತೋಷ್ ನಾಯಕ್, ವಸಂತ, ನರೇಂದ್ರ ನಾಯಕ್, ನಾಗರಾಜ್ ಬಿ.ಶೆಟ್ಟಿ, ನಿತೀಶ್ ಎಸ್.ಪಿ., ಸಂತೋಷ್ ಕುವಾರ್, ಸತೀಶ್ ನಾಯ್ಕ, ಸುದೀಪ್ ಭಟ್, ಸುದೀಪ್ ಶೇರಿಗಾರ್, ಪ್ರಸನ್ನ ಶೇರಿಗಾರ್, ವಿದ್ಯಾ ಮಲ್ಯ ಇದ್ದರು. ಹೆಬ್ರಿ ಕ್ರಿಕೆಟರ್ ತಂಡ ಪ್ರಥಮ ಸ್ಥಾನ, ಭದ್ರಕಾಳಿ ಫ್ರೆಂಡ್ಸ್ ಮುದ್ರಾಡಿ ದ್ವಿತೀಯ ಸ್ಥಾನ ಪಡೆಯಿತು. ವೇದಿಕೆ ಸಮಿತಿ ಸಂಚಾಲಕ ಪ್ರಸಾದ್ ಶೆಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net