

ಸಿದ್ದಾಪುರ: ಸ್ಥಳೀಯ ಸ್ಪೋರ್ಟ್ಸ್ ಅಕಾಡೆಮಿ ಮತ್ತು ಭಟ್ ಚೆಸ್ ಸ್ಕೂಲ್ ಶಿರಸಿ ಆಶ್ರಯದಲ್ಲಿ ದಿ. ಶಂಕರ್ ಶೇಟ್ ಸ್ಮರಣಾರ್ಥ ತೃತೀಯ ಓಪನ್ ರ್ಯಾಪಿಡ್ ಚೆಸ್ ಟೂರ್ನಾಮೆಂಟ್ ಪಟ್ಟಣದ ರಾಘವೇಂದ್ರ ಮಠದ ಸಭಾಭವನದಲ್ಲಿ ಡಿ. 29ರಂದು ಬೆಳಗ್ಗೆ 9ರಿಂದ ನಡೆಯಲಿದೆ.
ಪಂದ್ಯಾವಳಿಯು 8,10, 12, 14, 16 ಮತ್ತು ಮುಕ್ತ ವರ್ಗದವರಿಗೆ ಹೀಗೆ 6 ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ನಡೆಯಲಿದೆ. ಆಸಕ್ತರು ಡಿ. 27ರೊಳಗೆ ಆನಂದ ಸ್ವಾಮಿ ಅಥವಾ ವಿನಾಯಕ ಶೇಟ್ ಅವರನ್ನು ಸಂರ್ಪಸುವಂತೆ ಸಂಘಟಕರು ತಿಳಿಸಿದ್ದಾರೆ.