

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಮಲಾಪುರ ತಾಲೂಕಿನ ಕಲಬುರ್ಗಿ ನಿವಾಸಿ ಪ್ರಥಮೇಶ ತಂದೆ ಸಿದ್ದರಾಜ (21) ಎಂಬಾತ ಬೆಣ್ಣೆತೋರಾ ಜಲಾಶಯದ ಹಿನ್ನೀರಿನಲ್ಲಿ ಜಿಗಿದಿದ್ದಾನೆ. ಕೆಲ ದಿನಗಳ ಹಿಂದೆ ಕಲಬುರಗಿಯ ಯುವಕ ಇದೇ ಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.
ಯುವಕ ಸಿದ್ದರಾಜ ಆತ್ಮಹತ್ಯೆ ಮಾಡಿಕೊಳ್ಳಲು ನೀರಿಗೆ ದುಮುಕಿದ್ದಾನೆ ಎಂದು ಮಹಾಗಾಂವ ಪೊಲಿಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಯುವಕ ಕೋಚಿಂಗ್ ಗೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೊರಗೆ ಹೊರಗಿದ್ದ, ಕುರಿಕೋಟಾ ಸೇತುವೆಯ ಬಳಿ ಯುವಕನ ಬೈಕ್ ನಿಂತಿದ್ದು ಕಂಡು ಬಂದಿದೆ.
ಮಹಾಗಾಂವ ಪೊಲಿಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ಆರಂಭಿಸಿದ್ದಾರೆ ಇನ್ನೂ ಯುವಕ ಪತ್ತೆಯಾಗಿಲ್ಲ.