

ಕುಂದಾಪುರ: ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ತಾಲೂಕು ಮಟ್ಟದಲ್ಲಿ ಶಿಬಿರ ನಡೆಸುವ ಬಗ್ಗೆ ಚಿಂತನೆ ನಡೆದಿದೆ. ಗ್ಯಾರಂಟಿ ಯೋಜನೆ ವ್ಯಾಪ್ತಿಗೆ ಬರುವ ಐದು ಇಲಾಖೆಗಳಿಂದ ಫಲಾನುಭವಿಗಳ ಶಿಬಿರ ಏರ್ಪಡಿಸಬೇಕು, ಇದರ ಸಾಧಕ ಬಾಧಕಗಳ ಚರ್ಚೆ ನಡೆಸಬೇಕು ಎಂದು ಕುಂದಾಪುರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಹೇಳಿದರು.
ಕುಂದಾಪುರದ ತಾಲೂಕು ಪಂಚಾಯಿತಿಯಲ್ಲಿ ಸೋಮವಾರ ನಡೆದ ಗ್ಯಾರಂಟಿ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ವಾತನಾಡಿದರು.
ಕೇಬಲ್ ಅಳವಡಿಕೆಗೆ ಅನುಮತಿ ಪಡೆದುಕೊಂಡ ವಿದ್ಯುತ್ ಕಂಬಗಳಿಗಿಂತ 10 ಪಟ್ಟು ಅಧಿಕ ಕಂಬಗಳಲ್ಲಿ ಕೇಬಲ್ಗಳನ್ನು ಅಳವಡಿಸಲಾಗುತ್ತಿದೆ. ಹೀಗಾಗಿ ಇದಕ್ಕೆ ಸರಿಯಾದ ಮಾರ್ಗಸೂಚಿ ನೀಡಬೇಕು ಮತ್ತು ಅವುಗಳನ್ನು ಪಾಲಿಸಬೇಕು ಎಂದರು.
ನಾಲ್ಕು ಸಾವಿರ ಮನೆಗಳಿರುವ ಗಂಗೊಳ್ಳಿಯಲ್ಲಿ ಇಬ್ಬರು ಲೈನ್ಮೆನ್, ಅದೇ 300 ಮನೆಗಳಿರುವ ಗ್ರಾಮಕ್ಕೂ ಇಬ್ಬರು ಲೈನ್ಮೆನ್ಗಳಿದ್ದಾರೆ. ಗಂಗೊಳ್ಳಿಯಲ್ಲಿ ಸಂಜೆ ಬಳಿಕ ರಾತ್ರಿ ಪಾಳಿಗೆ ಜನ ಇಲ್ಲ. ದಾಕುಹಿತ್ಲು, ಸುಗ್ಗಿಬೈಲು ಹಾಗೂ ಲೈಟ್ಹೌಸ್ ಪರಿಸರದಲ್ಲಿ ವಿದ್ಯುತ್ ಪರಿವರ್ತಕದ ಸಮಸ್ಯೆ ಇದೆ ಎಂದು ಜಹೀರ್ ಅಹಮದ್ ಹೇಳಿದರು.
ಜಡ್ಡಿನಗದ್ದೆಯಿಂದ ಕೆಎಸ್ಆರ್ಟಿ ಬಸ್ ಸರಿಯಾಗಿ ಸಂಚರಿಸುತ್ತಿಲ್ಲ. ಇದೇ ಬಸ್ಸನ್ನು ನಂಬಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಯಾವಾಗ ಬಸ್ ಬರುತ್ತೋ ಎಂಬಂತಾಗಿ ಇಲ್ಲಿನ ಪರಿಸ್ಥಿತಿ ಎಂದು ವಸುಂಧರ ಹೆಗ್ಡೆ ಹೇಳಿದರು.
ಸ್ಥಗಿತಗೊಂಡಿದ್ದ ಜಡ್ಡಿನಗದ್ದೆ ಉಡುಪಿ, ಹಾಲಾಡಿ ಚೋರಾಡಿ, ಸಿದ್ಧಾಪುರ ಕಾರ್ಕಳ ಹೆಬ್ರಿ ವಾರ್ಗದಲ್ಲಿ ಬಸ್ ಸಂಚಾರ ಪುನರಾಂಭಿಸಲಾಗಿದೆ. ಕುಂದಾಪುರಬಡಾಕೆರೆ ಮತ್ತು ಬೈಂದೂರು ಕೊಲ್ಲೂರು ವಾರ್ಗದಲ್ಲಿ ನ್ಯಾಯಾಲಯದ ತಡೆಯಾಜ್ಞೆ ಇದೆ. ಶಂಕರನಾರಾಯಣ ಕೊಲ್ಲೂರು ವಾರ್ಗದ ರೂಟ್ ಸರ್ವೇ ವಾಡಿ ಪರ್ಮಿಟ್ಗೆ ಅರ್ಜಿ ಸಲ್ಲಿಸಲಾಗುವುದು. ಬಡಾಕೆರೆ ವಾರ್ಗದಲ್ಲಿ ಪರ್ಮಿಟ್ ಆಗಿದ್ದು, ವೇಳಾಪಟ್ಟಿ ಸಭೆ ಆಗಿಲ್ಲ. ಕುಂದಾಪುರ ಡಿಪೋಗೆ 60 ಮಂದಿ ಚಾಲಕರ ನೇಮಕಾತಿ ನಡೆದಿದ್ದು, ತರಬೇತಿಗೆ ತೆರಳಿದ್ದಾರೆ. ಒಂದು ವಾರದೊಳಗೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಕೆಎಸ್ಆರ್ಟಿಸಿ ಅಧಿಕಾರಿ ಬಿ.ಟಿ.ನಾಯ್ಕ ಹೇಳಿದರು.
ಕುಂದಾಪುರದ ಶಾಸಿ ವೃತ್ತದ ಬಳಿ ಕೆಎಸ್ಆರ್ಟಿಸಿ ಬಸ್ಗಳಿಗೆ ತಾತ್ಕಾಲಿಕ ನಿಲುಗಡೆಗೆ ಅನುಮತಿ ನೀಡುವಂತೆ ಪೊಲೀಸರಿಗೆ ಮನವಿ ಮಾಡಲಾಗುವುದು. ಕೆಎಸ್ಆರ್ಟಿಸಿಯವರು ಪರ್ಮಿಟ್ ತೆಗೆದುಕೊಳ್ಳುವ ಸಂದರ್ಭ ಶಾಲಾ ಮಕ್ಕಳಿಗೆ ಅನುಕೂಲವಾಗುವಂತಹ ವೇಳಾಪಟ್ಟಿಯನ್ನು ನೀಡಬೇಕು ಎಂದು ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಹೇಳಿದರು.
ಕುಂದಾಪುರ ತಾಪಂ. ಕಾರ್ಯನಿರ್ವಹಣಾಧಿಕಾರಿ ಡಾ.ರವಿಕುವಾರ್ ಹುಕ್ಕೇರಿ, ಸದಸ್ಯರಾದ ಅಭಿಜಿತ್ ಪೂಜಾರಿ, ವಾಣಿ ಆರ್.ಶೆಟ್ಟಿ, ಆಶಾ ಕರ್ವಾಲೋ, ನಾರಾಯಣ ಆಚಾರ್, ಗಣೇಶ್, ಕೆ.ಪ್ರದೀಪಕುವಾರ್ ಶೆಟ್ಟಿ, ಅರುಣ್, ಹರ್ಷ ಶೆಟ್ಟಿ, ಸವಿತಾ ಪೂಜಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು ಮೊದಲಾದವರು ಇದ್ದರು.