

ವಿಜಯವಾಣಿ ಸುದ್ದಿಜಾಲ ಕುಂದಾಪುರ
ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಪೂರ್ವಭಾವಿ ಸಭೆ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆಯಿತು.
ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ಬ್ಲಾಕ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಅವರು ಶುಭಹಾರೈಸಿದರು. ನಿಯೋಜಿತ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್, ಪುರಸಭಾ ಸದಸ್ಯೆ ಪ್ರಭಾವತಿ ಶೆಟ್ಟಿ ಹಾಗೂ ತಾಲೂಕು ಕೆಡಿಪಿ ಸದಸ್ಯೆ ಜ್ಯೋತಿ ಪುತ್ರನ್ ಮಾತನಾಡಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ಚಂದ್ರಿಕಾ ಶೆಟ್ಟಿ, ಮಿನಾಕ್ಷಿ ಮಾಧವ್, ಶಾಂತಿ ಪಿರೇರಾ, ಅನಿತಾ ಡಿಸೋಜ, ಸಂಧ್ಯಾ ತಿಲಕ್, ತಾಲೂಕು ಗ್ಯಾರಂಟಿ ಸಮಿತಿ ಸದಸ್ಯೆ ವಾಣಿ ಆರ್.ಶೆಟ್ಟಿ, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ರೇವತಿ ಶೆಟ್ಟಿ, ಪ್ರಮುಖರಾದ ಗಿರಿಜಾ ಉದಯ್, ಜಾನಕಿ ಬಿಲ್ಲವ, ಸವಿತಾ, ಜೆಸಿಂತಾ ಡಿಮೆಲ್ಲೊ, ಪ್ರಭಾವತಿ ಶೆಟ್ಟಿ ಬೇಳೂರು, ಶಾಲೆಟ್ ರೆಬೆಲ್ಲೊ, ರಾಜೀವಿ, ಸುರೇಖಾ, ಜಯ, ಮುತ್ತು, ಮೇಬಲ್ ಡಿಸೋಜ, ವೇಲಾ ಬ್ರಗಾಂಜ, ಮೂಕಾಂಬಿಕಾ, ಶೋಭಾ, ಸುಶೀಲಾ, ಪುಷ್ಪಾ, ಲೀಲಾ, ಗಿರಿಜಾ ಶಂಕರ್, ಲಲಿತಾ, ನಗರ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಾಸ್ಟೊ, ಕೆ.ವಿಜಯ್ ಪುತ್ರನ್ ಉಪಸ್ಥಿತರಿದ್ದರು. ದೇವಕಿ ಸಣ್ಣಯ್ಯ ಸ್ವಾಗತಿಸಿದರು. ಗೀತಾ ವಾಗ್ಲೆ ಪ್ರಸ್ತಾವನೆಗೈದರು. ಆಶಾ ಕರ್ವಾಲ್ಲೊ ಕಾರ್ಯಕ್ರಮ ನಿರೂಪಿಸಿದರು.