

ವಿಜಯವಾಣಿ ಸುದ್ದಿಜಾಲ ಬೈಂದೂರು
ಈ ಸೃಷ್ಟಿಯ ನಿಯಮವನ್ನು ಮೀರಲು ಯಾರಿಗೂ ಸಾಧ್ಯವಾಗದು. ಮನುಷ್ಯನ ಜೀವಿತಾವಧಿಯಲ್ಲಿ ವಾಡಿದ ಸತ್ಕಾರ್ಯಗಳು ವಾತ್ರ ನಂತರದ ದಿನಗಳಲ್ಲಿ ಗಣನೆಗೆ ಬರುತ್ತದೆ ಎಂದು ವಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.
ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಮಂಗಳವಾರ ನಡೆದ ಹಿರಿಯ ಸಹಕಾರಿ, ಕಂಬಳ ಸಮಿತಿ ಅಧ್ಯಕ್ಷ ಸಸಿಹಿತ್ಲು ವೆಂಕಟ ಪೂಜಾರಿ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ವಾತನಾಡಿ, ಧಾರ್ಮಿಕ ಶ್ರದ್ಧೆಯೊಂದಿಗೆ ಸಾವಾಜಿಕ ಕಳಕಳಿ ಹೊಂದಿದ್ದ ವೆಂಕಟ ಪೂಜಾರಿ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕಂಬಳ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದರು. ತಮ್ಮ ಸತ್ಚಿಂತನೆ ಹಾಗೂ ಸರಳ ಜೀವನ ಶೈಲಿಯಿಂದ ಇತರರಿಗೆ ವಾದರಿಯಾಗಿದ್ದರು ಎಂದರು.
ಉಡುಪಿ ಜಿಲ್ಲಾ ಕಂಬಳ ಸಮಿತಿ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ವಾತನಾಡಿ, ಬೈಂದೂರು ತಾಲೂಕು ಕಂಬಳ ಸಮಿತಿ ಅಧ್ಯಕ್ಷ ವೆಂಕಟ ಪೂಜಾರಿ ಕಂಬಳದ ಪೋಷಕರಾಗಿದ್ದು, ಈ ಭಾಗದ ಯುವಕರಿಗೆ ಕಂಬಳದಲ್ಲಿ ಆಸಕ್ತಿ ಮೂಡಿಸಿದ ಮೊದಲ ವ್ಯಕ್ತಿಯಾಗಿದ್ದರು ಎಂದರು.
ಬೈಂದೂರು ವಲಯ ಬಿಲ್ಲವ ಸಂ ಅಧ್ಯಕ್ಷ ಗಣೇಶ ಎಲ್.ಪೂಜಾರಿ ವಾತನಾಡಿ, ಅಜಾತಶತ್ರುವಾಗಿದ್ದ ವೆಂಕಟ ಪೂಜಾರಿ ಅವರು ಮಾಡುತ್ತಿದ್ದ ವಾಡುವ ಪ್ರತಿಯೊಂದು ಕೆಲಸದಲ್ಲಿಯೂ ಸಹೋದರತ್ವ, ಪ್ರೀತಿ, ವಿಶ್ವಾಸ ಇರುತ್ತಿತ್ತು ಎಂದರು. ಮೃತರ ಮಕ್ಕಳು, ಕುಟುಂಬಸ್ಥರು ಇದ್ದರು. ಗೋಪಾಲ ಶೆಟ್ಟಿ ಮೂರೂರು ಕಾರ್ಯಕ್ರಮ ನಿರ್ವಹಿಸಿದರು.