ಆನ್‌ಲೈನ್ ಖರೀದಿಗೆ ಬೇಕು ಎಚ್ಚರಿಕೆ

web12
Published on

ನ್ಯಾಯಾಧೀಶೆ ನೇರಳೆ ವೀರಭದ್ರಯ್ಯ ಭವಾನಿ ಸಲಹೆ ಗ್ರಾಹಕ ಹಕ್ಕುಗಳ ಅರಿವು ಅಗತ್ಯ

ಚಿಕ್ಕಬಳ್ಳಾಪುರ: ಗ್ರಾಹಕರು ಹಕ್ಕುಗಳ ಬಗೆಗಿನ ತಿಳಿವಳಿಕೆ ಹೊಂದಿದ್ದರೆ ವಂಚನೆಗೊಳಗಾಗುವುದು ತಪ್ಪುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ನೇರಳೆ ವೀರಭದ್ರಯ್ಯ ಭವಾನಿ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ವಾಪನ ಶಾಸ್ತ್ರ ಇಲಾಖೆ, ರಾಜ್ಯ ಆಹಾರ ನಾಗರಿಕ ಸರಬರಾಜು ನಿಗಮ, ಜಿಲ್ಲಾ ವಕೀಲರ ಸಂ ಹಾಗೂ ಜಿಲ್ಲಾ ಗ್ರಾಹಕರ ವಾಹಿತಿ ಕೇಂದ್ರದ ವತಿಯಿಂದ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನಾಚರಣೆಯನ್ನು ಉದ್ಘಾಟಿಸಿ ವಾತನಾಡಿದರು.

ಗ್ರಾಹಕರು ವಾಣಿಜ್ಯ ವ್ಯಾಪಾರ ಮಳಿಗೆಗಳಲ್ಲಿ ವಸ್ತುಗಳನ್ನು ಖರೀದಿಸುವ ವೇಳೆ ಉತ್ಪನ್ನಗಳ ಗುಣಮಟ್ಟ ಹಾಗೂ ಪ್ರವಾಣ ಸೇರಿ ಸಮರ್ಪಕ ವಾಹಿತಿ ತಿಳಿದುಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಬಹುತೇಕರು ಸರಕು, ಸೇವೆಯ ಇತರ ವ್ಯವಹಾರಗಳಿಗೆ ಆನ್‌ಲೈನ್ ಬುಕ್ಕಿಂಗ್‌ಗೆ ಮೊರೆ ಹೋಗುತ್ತಿದ್ದಾರೆ. ಇದೇವೇಳೆ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದರು.

ಅಸಲಿ ವೆಬ್‌ಸೈಟ್‌ಗಳ ಮಾದರಿಯಲ್ಲಿ ನಕಲಿ ಜಾಲತಾಣಗಳ ಮೂಲಕ ವಂಚಕರು ಮೋಸ ವಾಡುತ್ತಿದ್ದಾರೆ. ಅದರಲ್ಲೂ ಇಂತಹ ಪ್ರಕರಣಗಳು ಸಾವಾಜಿಕ ಜಾಲತಾಣಗಳಲ್ಲಿ ಹೆಚ್ಚಾಗುತ್ತಿದೆ. ಇದಕ್ಕೆ ವಂಚನೆಗೊಳಗಾದವರು ನ್ಯಾಯ ಪಡೆಯಲು ಹಿಂಜರಿಯಬಾರದು. ಸೂಕ್ತ ಸಕ್ಷಮ ಪ್ರಾಧಿಕಾರಗಳನ್ನು ಸಂಪರ್ಕಿಸಬೇಕು ಎಂದು ಹೇಳಿದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್. ಕುವಾರ್ ವಾತನಾಡಿ, ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನಾಚರಣೆ ಗ್ರಾಹಕರಿಗೆ ಸಿಗಬೇಕಾದ ಗರಿಷ್ಠ ಪ್ರಯೋಜನಗಳನ್ನು ಪಡೆಯುವಂತಾಗಲು ಅರಿವು ಮೂಡಿಸುವಲ್ಲಿ ನೆರವಾಗುತ್ತದೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಶಿಲ್ಪಾ, ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್ ಕೆಳಗಿನಮನಿ ಮತ್ತಿತರರು ಇದ್ದರು.

ನ್ಯಾಯ ಪಡೆಯಲು ಪ್ರಯತ್ನವಿಲ್ಲ

ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ವಾತನಾಡಿ, ಬಹುತೇಕರು ಚಿಕ್ಕ ವ್ಯವಹಾರಕ್ಕೂ ಡಿಜಿಟಲ್ ಮೂಲಕವೇ ಹಣ ಪಾವತಿಸುತ್ತಿದ್ದಾರೆ. ಈ ತಂತ್ರಜ್ಞಾನದ ಮೂಲಕ ಬ್ಯಾಂಕ್ ಖಾತೆಗಳಲ್ಲಿ ಎಷ್ಟು ಹಣ ಇದೆ?. ಎಷ್ಟು ಖರ್ಚಾಗಿದೆ ಎನ್ನುವ ಮಾಹಿತಿ ಸುಲಭವಾಗಿ ಸಿಗುತ್ತದೆ. ವಾಹಿತಿಯ ಕೊರತೆ, ಸಮಯದ ಅಭಾವ, ನಿರ್ಲಕ್ಷತೆಯ ಕಾರಣದಿಂದ ಗ್ರಾಹಕರು ನಿರಂತರವಾಗಿ ಮೋಸ ಹೋಗುತ್ತಿದ್ದಾರೆ. ಹಾಗೆಯೇ ನ್ಯಾಯ ಪಡೆಯಲು ಅನೇಕರು ಪ್ರಯತ್ನಿಸುವುದಿಲ್ಲ. ಈ ಪ್ರವೃತ್ತಿ ಒಳ್ಳೆಯದಲ್ಲ ಎಂದರು.

ಭಿತ್ತಿಪತ್ರ ಬಿಡುಗಡೆ

ಗ್ರಾಹಕ ನ್ಯಾಯಕ್ಕೆ ವರ್ಚ್ಯುವಲ್ ವಿಚಾರಣೆ ಮತ್ತು ಡಿಜಿಟಲ್ ಪ್ರವೇಶ ಎಂಬ ೋಷವಾಕ್ಯದ ಕಾರ್ಯಕ್ರಮದಲ್ಲಿ ಗ್ರಾಹಕರ ಜಾಗೃತಿಗಾಗಿ ಕರಪತ್ರ ಹಾಗೂ ಭಿತ್ತಿಪತ್ರಗಳನ್ನು ಗಣ್ಯರು ಬಿಡುಗಡೆಗೊಳಿಸಿದರು. ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ 50 ಲಕ್ಷ ರೂ.ವರೆಗಿನ ಮೋಸದ ಪ್ರಕರಣಗಳಿಗೆ ನ್ಯಾಯ ಕೋರಿ ಅರ್ಜಿ ಸಲ್ಲಿಸುವುದು, ವಾಹಿತಿಗಾಗಿ ಜಿಲ್ಲಾ ಗ್ರಾಹಕರ ವಾಹಿತಿ ಕೇಂದ್ರ ಸಂಪರ್ಕ, ಗ್ರಾಹಕ ಕಾಯ್ದೆ, ಸವಲತ್ತುಗಳು ಬಗ್ಗೆ ಅರಿವು ಮೂಡಿಸಲಾಯಿತು. ತೂಕ ಮತ್ತು ಅಳತೆಯ ಮಾಪನ ಯಂತ್ರಗಳು, ವಿವಿಧ ಉಪಕರಣಗಳ ಪ್ರಾತ್ಯಕ್ಷಿಕೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net