ಬೆಲೆ ಕುಸಿತದಿಂದ ಈರುಳ್ಳಿ ಬೆಳೆ ನಾಶ

ತಳಕಲ್ಲು ಗ್ರಾಮದಲ್ಲಿ ರೂಟಾವೇಟರ್ ಮೂಲಕ ರೈತ ಬಾಬುಸಾಬ್ ಪಿರಿ ಜಮೀನಿನಲ್ಲಿ ಈರುಳ್ಳಿ ಬೆಳೆ ನಾಶಪಡಿಸಿದರು.
ತಳಕಲ್ಲು ಗ್ರಾಮದಲ್ಲಿ ರೂಟಾವೇಟರ್ ಮೂಲಕ ರೈತ ಬಾಬುಸಾಬ್ ಪಿರಿ ಜಮೀನಿನಲ್ಲಿ ಈರುಳ್ಳಿ ಬೆಳೆ ನಾಶಪಡಿಸಿದರು.
Published on

ಹೂವಿನಹಡಗಲಿ: ಇತ್ತೀಚಿಗೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಭಾರಿ ಕುಸಿತ ಕಂಡಿರುವುದರಿಂದ ತಾಲೂಕಿನ ತಳಕಲ್ಲು ಗ್ರಾಮದ ರೈತ ಬಾಬುಸಾಬ್ ಪಿರಿ ಅವರು ಎರಡು ಎಕರೆ ಜಮೀನಿನಲ್ಲಿ ಬೆಳೆದ ಈರುಳ್ಳಿ ಬೆಳೆಯನ್ನು ಟ್ರಾೃಕ್ಟರ್ ಮೂಲಕ ಭಾನುವಾರ ನಾಶಪಡಿಸಿದರು.

ಈರುಳ್ಳಿ ಮಾರಾಟದಿಂದ ಬರುವ ಹಣ ಜಮೀನಿನಲ್ಲಿ ಕೂಲಿಕಾರ್ಮಿಕರಿಗೆ ನೀಡಲು ಆಗಲ್ಲ. ಜತಗೆ ಈರುಳ್ಳಿ ಮಾರಾಟ ಮಾಡಲು ಕಷ್ಟವಾಗುತ್ತದೆ. ಹಾಗಾಗಿ ಕಟಾವು ಹಂತದ ಎಬೆಳೆಯನ್ನು ರೂಟಾವೇಟರ್ ಹೊಡೆದು ನಾಶಪಡಿಸಲು ಮುಂದಾಗಿದ್ದಾರೆ

ಬೆಂಗಳೂರು ಮಾರುಕಟ್ಟೆಯಲ್ಲಿ ದೊಡ್ಡಗಾತ್ರದ ಈರುಳ್ಳಿ ಕ್ವಿಂಟಲ್‌ಗೆ 600 ರಿಂದ 1,400 ರೂ. ವರೆಗೆ ಮಾರಾಟವಾಗಿದೆ. ಆದರೆ, ಸಣ್ಣ ಗಾತ್ರದ ಈರುಳ್ಳಿಯನ್ನು ಗ್ರಾಹಕರು ಖರೀದಿಸುತ್ತಿಲ್ಲ. ಇಷ್ಟು ದಿನ ಬೆಳೆಸಿ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದೆ. ಈಗ ನಷ್ಟವಾಗುತ್ತಿದೆ ಎಂದು ರೈತ ಬಾಬುಸಾಬ್ ಪಿರಿ ಅಳಲು ತೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net