More

    ಟ್ರ್ಯಾಕ್ಟರ್​ನಿಂದ ಈರುಳ್ಳಿ ಬೆಳೆ ನಾಶ

    ಗುತ್ತಲ: ಲಾಕ್​ಡೌನ್​ನಿಂದಾಗಿ ಈರುಳ್ಳಿ ಬೆಲೆ ದಿಢೀರ್ ಕುಸಿತಗೊಂಡಿದ್ದರಿಂದ ಬೇಸತ್ತ ರೈತನೋರ್ವ ಬೆಳೆಯನ್ನು ಟ್ರಾ್ಯಕ್ಟರ್​ನಿಂದ ನಾಶಪಡಿಸಿದ ಘಟನೆ ಬುಧವಾರ ನಡೆದಿದೆ.

    ಪಟ್ಟಣದ ರೈತ ನಿಂಗಪ್ಪ ಗುಡ್ಡಪ್ಪ ಜಾನಕ್ಕಿ ಫಸಲು ನಾಶ ಮಾಡಿದ ರೈತ. ‘3.20 ಎಕರೆಯ ಜಮೀನಿನಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ ಬೀಜ, ಗೊಬ್ಬರ, ಬಿತ್ತನೆ, ಕಳೆ ಸೇರಿ ಹಂತ ಹಂತವಾಗಿ ಖರ್ಚು ಮಾಡಿದ್ದೆ. ಲಾಕ್​ಡೌನ್ ಮೊದಲು ಈರುಳ್ಳಿಗೆ ಬಂಗಾರದ ಬೆಲೆ ಇತ್ತು. ಆದರೆ, ಈಗ ಬೆಲೆ ಕುಸಿತದಿಂದ ದಿಕ್ಕು ತೋಚದಂತಾಗಿದೆ. ಬೆಳೆ ಕಿತ್ತ ಹಣವೂ ಮಾರಾಟದಿಂದ ಸಿಗಲಾರದು ಎಂದು ಟ್ರ್ಯಾಕ್ಟರ್​ನಿಂದ ನಾಶ ಮಾಡಿದ್ದೇನೆ’ ಎಂದು ನಿಂಗಪ್ಪ ನೋವಿನಿಂದ ಹೇಳಿದರು.

    ರೈತ ಮುಖಂಡ ಲೆಕ್ಕಪ್ಪ ಆನ್ವೇರಿ ಮಾತನಾಡಿ, ಸಾಲ ಮಾಡಿ, ವರ್ಷ ಪೂರ್ತಿ ಹೊಲ ಹದ ಮಾಡಿ ಈರುಳ್ಳಿ ಬೆಳೆಯಲಾಗಿತ್ತು. ಆದರೆ, ಸೂಕ್ತ ಬೆಲೆ ಸಿಗದೇ ರೈತನೇ ನಾಶಪಡಿಸಿರುವುದು ದುರ್ದೈವವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

    ಈರುಳ್ಳಿಯನ್ನು ನಾಶಗೊಳಿಸುವ ಸುದ್ದಿ ತಿಳಿದು ಹತ್ತಿರದ ರಾಜೀವನಗರ ತಾಂಡಾದ ಅನೇಕರು ತಂಡೋಪತಂಡವಾಗಿ ಹೊಲಕ್ಕೆ ಆಗಮಿಸಿ ಚೀಲಗಟ್ಟಲೆ ಈರುಳ್ಳಿಯನ್ನು ತುಂಬಿಕೊಂಡು ಹೋದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts