ಆತ ಮೀನು ತರಲೆಂದು ರಸ್ತೆ ದಾಟಿದ್ದಷ್ಟೇ, ಆಮೇಲಾಗಿದ್ದೇ ಬೇರೆ..

Manju
Published on

ಉಡುಪಿ: ಮೀನು ತರಲೆಂದು ರಸ್ತೆಗಿಳಿದ ಆತ ಮರಳಿ ಬಾರದ ಲೋಕಕ್ಕೆ ಹೋಗಿಬಿಟ್ಟಿದ್ದಾನೆ. ರಸ್ತೆ ದಾಟುವ ಮುನ್ನವೇ ಯಮಸ್ವರೂಪಿಯಾಗಿ ಬಂದಂಥ ಟೆಂಪೊ ಟ್ರಾವೆಲರೊಂದು ರಸ್ತೆ ಮಧ್ಯೆಯೇ ಆತನ ಪ್ರಾಣಪಕ್ಷಿಯನ್ನು ಹಾರಿಸಿಕೊಂಡು ಹೋಗಿದೆ.

ಹೀಗೆ ದುರಂತ ಸಾವಿಗೀಡಾದ ವ್ಯಕ್ತಿ ಭಟ್ಕಳ ಜಾಲಿ ನಿವಾಸಿ ಮಂಜು (46). ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ರಾಹುತನಕಟ್ಟೆಯಲ್ಲಿ ಈ ಅಪಘಾತ ಸಂಭವಿಸಿದೆ. ಬೈಕ್​ನಲ್ಲಿ ಸಾಗುತ್ತಿದ್ದ ಮಂಜು ಮಾರ್ಗಮಧ್ಯೆ ಬೈಕ್ ನಿಲ್ಲಿಸಿ ಮೀನು ತರಲೆಂದು ಹೋಗಿದ್ದೇ ಪ್ರಾಣಕ್ಕೆ ಸಂಚಕಾರ ತಂದಿದೆ.

ರಾಹುತನಕಟ್ಟೆ ಬಳಿ ಮೀನು ತರಲಿಕ್ಕೆಂದು ಮಂಜು ರಸ್ತೆ ದಾಟುತ್ತಿದ್ದಾಗ ಧರ್ಮಸ್ಥಳದಿಂದ ಭಟ್ಕಳ ಕಡೆಗೆ ಸಾಗುತ್ತಿದ್ದ ಟೆಂಪೊ ಟ್ರಾವೆಲರ್ ಡಿಕ್ಕಿ ಹೊಡೆದಿದೆ. ಅದು ಡಿಕ್ಕಿ ಹೊಡೆದ ರಭಸಕ್ಕೆ ಮಂಜು ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಸ್ಥಳಕ್ಕೆ ಬೈಂದೂರು ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net