ಪರಿಚಿತನಿಂದಲೇ ವಿದ್ಯಾರ್ಥಿನಿ ಮೇಲೆ ಹಲ್ಲೆ-ಅತ್ಯಾಚಾರ ಯತ್ನ; ಮೈಸೂರಿನಲ್ಲಿ ನಡೆದ ಪ್ರಕರಣದ ಆರೋಪಿಯ ಬಂಧನ

rape
Published on

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿರುವ ಹಲ್ಲೆ ಹಾಗೂ ಅತ್ಯಾಚಾರ ಯತ್ನಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಆತನನ್ನು ವಶಕ್ಕೆ ಪಡೆದಿರುವುದರಿಂದ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.

ಮೈಸೂರಿನ ಆರ್.ಎಸ್​.ನಾಯ್ಡು ನಗರದ ಪ್ರಮುಖ ರಸ್ತೆಯಲ್ಲಿರುವ ಸ್ಟಡಿಹೌಸ್​ನಲ್ಲಿ ಈ ಘಟನೆ ನಡೆದಿದೆ. ಆರೋಪಿ ಅತ್ಯಾಚಾರಕ್ಕೆ ಮುಂದಾಗುವ ಮೊದಲು ಆಂಧ್ರಪ್ರದೇಶ ಮೂಲದ ಏಳು ಮಂದಿ ಸ್ಟಡಿಹೌಸ್​ನಲ್ಲಿದ್ದರು. ಅವರೆಲ್ಲ ತರಗತಿಗೆ ತೆರಳುತ್ತಿದ್ದಂತೆ ಆತ ಒಬ್ಬಂಟಿ ವಿದ್ಯಾರ್ಥಿನಿಯ ಮೈಮೇಲೆರಗಿದ್ದಾನೆ.

ಪ್ರಕರಣ ದಾಖಲಿಸಿಕೊಂಡು ತಕ್ಷಣ ಕಾರ್ಯಪ್ರವೃತ್ತರಾದ ಎನ್.ಆರ್​. ಠಾಣೆ ಪೊಲೀಸರು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಅದರಲ್ಲೂ ಆರೋಪಿ ಸಂತ್ರಸ್ತೆಯ ಪರಿಚಿತನೇ ಆಗಿದ್ದಾನೆ ಎಂಬುದಾಗಿ ಮೈಸೂರು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು ತಿಳಿಸಿದ್ದಾರೆ. ಸ್ಥಳದಿಂದ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಹೇಳಿಕೆಗಳನ್ನು ಪಡೆಯಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ವಿವರಗಳು ಇನ್ನಷ್ಟೇ ಹೊರಬೀಳಬೇಕಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net