ಗ್ಯಾಂಗ್​ರೇಪ್ ಬೆನ್ನಿಗೇ ಮೈಸೂರಲ್ಲಿ ಮತ್ತೊಂದು ಅತ್ಯಾಚಾರ; ದಸರಾ ತಯಾರಿ ಸಂದರ್ಭದಲ್ಲೇ ಸಾಂಸ್ಕೃತಿಕ ನಗರಿಗೆ ಕಳಂಕ

rape on napali
Published on

ಮೈಸೂರು: ಇತ್ತೀಚೆಗೆ ನಡೆದ ಗ್ಯಾಂಗ್​ ರೇಪ್​ ಪ್ರಕರಣದ ನೆನಪಿನ್ನೂ ಹಸಿಹಸಿಯಾಗಿರುವಾಗಲೇ ಮೈಸೂರಿನಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ನಡೆದಿದ್ದು, ಮಕ್ಕಳು-ಮಹಿಳೆಯರು ಆತಂಕದಲ್ಲೇ ಓಡಾಡುವಂಥ ಪರಿಸ್ಥಿತಿ ಉಂಟಾಗಿದೆ.

ಇಂದು ನಗರದ ಆರ್​.ಎಸ್​.ನಾಯ್ಡು ಬಡಾವಣೆಯಲ್ಲಿ 28 ವರ್ಷದ ಮಹಿಳೆ ಮೇಲೆ ಅತ್ಯಾಚಾರ ನಡೆದಿದೆ. ಪ್ರಕರಣ ವರದಿಯಾಗಿರುವ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ತನಿಖೆ ನಡೆಯುತ್ತಿದೆ. ಎನ್​.ಆರ್​. ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

ದಸರಾ ಆಚರಣೆ ಸಲುವಾಗಿ ಇಂದು ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಉನ್ನತಮಟ್ಟದ ಸಮಿತಿ ಸಭೆ ನಡೆಯುತ್ತಿದ್ದು, ಅಲ್ಲಿ ಸಂಬಂಧಿತ ಸಂಸದರು, ಶಾಸಕರು, ಸಚಿವರು ಮತ್ತು ಅಧಿಕಾರಿಗಳೆಲ್ಲ ಸೇರಿ ಸುಸೂತ್ರವಾಗಿ ದಸರಾ ಆಚರಣೆ ಸಲುವಾಗಿ ಸಮಾಲೋಚನೆ ನಡೆಸಿದ್ದಾರೆ. ಮಾತ್ರವಲ್ಲದೆ ಗ್ಯಾಂಗ್​ರೇಪ್​ ಹಿನ್ನೆಲೆಯಲ್ಲಿ ದಸರೆ ಸಂದರ್ಭದಲ್ಲಿ ಇನ್ನೂ ಹೆಚ್ಚಿನ ಭದ್ರತೆ ವಹಿಸುವ ಕುರಿತು ಚರ್ಚೆ ನಡೆಸಿದ್ದಾರೆ. ಈ ಮಧ್ಯೆ ಇಂದೇ ಮೈಸೂರಲ್ಲಿ ಮತ್ತೊಂದು ಅತ್ಯಾಚಾರ ನಡೆದಿರುವುದು ಸಾರ್ವಜನಿಕರ ನೆಮ್ಮದಿಯನ್ನು ಕೆಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net