ಹುಬ್ಬಳ್ಳಿ ಗಲಭೆ ಪ್ರಕರಣ, ಮತ್ತೊಬ್ಬ ಪ್ರಮುಖ ಆರೋಪಿಯ ಬಂಧನ

Dadapeer Betageri
Published on

ಹುಬ್ಬಳ್ಳಿ: ವಾಟ್ಸ್​ಆ್ಯಪ್​ನಲ್ಲಿ ಎಡಿಟೆಡ್ ವಿಡಿಯೋವೊಂದನ್ನು ಸ್ಟೇಟಸ್ ಆಗಿ ಹಾಕಿಕೊಂಡಿದ್ದನ್ನೇ ನೆಪವಾಗಿಸಿಕೊಂಡು ಹುಬ್ಬಳ್ಳಿಯಲ್ಲಿ ಗಲಭೆ ಎಬ್ಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.

ಈ ಮೂಲಕ ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದಂತೆ ಎಐಎಂಐಎಂ ಪಕ್ಷದ ಮತ್ತೊಬ್ಬ ಮುಖಂಡನ ಬಂಧನ ಆದಂತಾಗಿದೆ. ಎಐಎಂಐಎಂ ನಗರ ಘಟಕದ ಅಧ್ಯಕ್ಷ ದಾದಾಪೀರ್ ಬೆಟಗೇರಿಯನ್ನು ಇಂದು ಹಳೇ ಹುಬ್ಬಳ್ಳಿ ಪೊಲೀಸರು ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

ನಿನ್ನೆ ಎಐಎಂಐಎಂ ಪಕ್ಷದ ಮುಖಂಡ, ಕಾರ್ಪೋರೇಟರ್​ ನಜೀರ್ ಅಹ್ಮದ್ ಹೊನ್ಯಾಳ ಎಂಬಾತನ್ನನು ಪೊಲೀಸರು ಬಂಧಿಸಿದ್ದರು. ಗಲಭೆಯಲ್ಲಿ ಈತನ ಪಾತ್ರ ಇರುವುದು ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಿದ ವಿಚಾರಣೆಯಲ್ಲಿ ಕಂಡುಬಂದಿದ್ದರಿಂದ ಪೊಲೀಸರು ಈತನನ್ನು ಬಂಧಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net