ಬಜರಂಗದಳದ ಹರ್ಷ ಕೊಲೆ ಪ್ರಕರಣ; ಇನ್ನೊಬ್ಬ ಆರೋಪಿಗೂ ಸಿಕ್ತು ಜಾಮೀನು..

Harsha
Published on

ಶಿವಮೊಗ್ಗ: ಬಜರಂಗದ ದಳದ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣದ ಒಂಬತ್ತನೇ ಆರೋಪಿಗೆ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಹರ್ಷ ಕೊಲೆ ಪ್ರಕರಣದ ಇನ್ನೊಬ್ಬ ಆರೋಪಿಗೂ ಜಾಮೀನು ಸಿಕ್ಕಂತಾಗಿದೆ.

ಪ್ರಕರಣದಲ್ಲಿ 9ನೇ ಆರೋಪಿ ಆಗಿರುವ ಸೈಯದ್ ನದೀಮ್ ಜಾಮೀನು ಪಡೆದ ವ್ಯಕ್ತಿ. ಬುಧವಾರ ಎನ್ಐಎ ಕೋರ್ಟ್​ ನ್ಯಾಯಾಧೀಶ ಗಂಗಾಧರ ವಿಚಾರಣೆ ನಡೆಸಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.

ಹರ್ಷನ ಕೊಲೆ ಪ್ರಕರಣದಲ್ಲಿ ಕೊಲೆ ಮಾಡಿದ ಪ್ರಮುಖ ಆರೋಪಿಗಳು ಮೊಬೈಲ್​ಫೋನ್​ ಮತ್ತು ಬಟ್ಟೆಗಳನ್ನು ಬಿಚ್ಚಿ ಈತನಿಗೆ ಕೊಟ್ಟು ಹೋಗಿದ್ದರು. ಆರೋಪಿಗಳಿಗೆ ಆಶ್ರಯ ನೀಡಿದ ಆರೋಪ ಕೇಳಿಬಂದಿತ್ತು. ಸೈಯದ್ ನದೀಮ್ ಪರ ರಹಮತ್ ಉಲ್ಲಾ ಕೊತ್ವಾಲ್ ಅವರು ವಾದ ಮಂಡಿಸಿದ್ದರು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಆರೋಪಿ ಜಾಫರ್ ಸಾದಿಕ್​ಗೆ ಜಾಮೀನು ದೊರೆತಿತ್ತು. ಜಾಫರ್ ಸಾದಿಕ್ ತನ್ನ ಕಾರನ್ನ ಕೊಲೆ ಹಂತಕರಿಗೆ ನೀಡಿದ್ದ ಆರೋಪ ಕೇಳಿಬಂದಿತ್ತು. ಆತನಿಗೂ ಜಾಮೀನು ದೊರೆತಿದೆ. ಹರ್ಷ ಕೊಲೆ ಪ್ರಕರಣದಲ್ಲಿ ಹತ್ತು ಆರೋಪಿಗಳನ್ನ ಪೊಲೀಸರು ಸೆರೆ ಹಿಡಿದು ಎನ್ಐಎಗೆ ಹಸ್ತಾಂತರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net