

ನುಗ್ಗೇಹಳ್ಳಿ: ಹೋಬಳಿ ಕೇಂದ್ರದ ಪುವರ್ಗ ಚಾರಿಟಬಲ್ ಟ್ರಸ್ಟ್‌ನ ಸಮಾಜಮುಖಿ ಕಾರ್ಯಗಳಿಗೆ ಒಂದು ತಿಂಗಳ ವೇತನ ನೀಡುವುದಾಗಿ ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ವೀರಶೈವ ಭವನದ ಮುಂಭಾಗ ಆಯೋಜಿಸಿದ್ದ ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ 50ನೇ ವರ್ಷದ ಜನ್ಮದಿನ ಮತ್ತು ಪುರವರ್ಗ ಹಿರೇಮಠ ಚಾರಿಟಬಲ್ ಟ್ರಸ್ಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಪುರ ವರ್ಗ ಹಿರೇಮಠ ಯಾವುದೇ ಜಾತಿ, ಧರ್ಮ ಭೇದವಿಲ್ಲದೆ ಎಲ್ಲ ಸಮಾಜದ ಕಷ್ಟ-ಸುಖಗಳಿಗೆ ಸ್ಪಂದಿಸುತ್ತಿದೆ. ಜನತೆಯಲ್ಲಿ ಧಾರ್ಮಿಕ ಮನೋಭಾವ ಬೆಳೆಸುತ್ತಾ ಮುನ್ನಡೆಯುತ್ತಿರುವುದು ಶ್ಲಾಘನೀಯ ವಿಚಾರ ಎಂದರು.
ಕಳೆದ ವರ್ಷ ಬರಗಾಲದಿಂದ ಹೇಮಾವತಿ ಜಲಾಶಯ ಭರ್ತಿಯಾಗದ ಕಾರಣ ನುಗ್ಗೇಹಳ್ಳಿ ಭಾಗದ ಕೆರೆಗಳಿಗೆ ನೀರು ಹರಿಸಲಾಗಲಿಲ್ಲ. ಈ ವರ್ಷ ಅಣೆಕಟ್ಟೆಯಿಂದ ನಾಲೆಗಳಿಗೆ ಪ್ರಾರಂಭದಲ್ಲೇ ನೀರು ಹರಿಸಲಾಗುತ್ತದೆ. ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಎಲ್ಲ ವರ್ಗದ ಬಡವರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆಗೆ ಅವಕಾಶ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಬ್ಯಾಗ್, ನೋಟ್‌ಬುಕ್ ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ಅಕ್ಷರ ಅಭ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ತಗಡೂರು ಶಿವಾನಂದ್ ಮಾತನಾಡಿದರು. ನವೀನ್‌ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಜಗದೀಶ್, ಟ್ರಸ್ಟ್ ಗೌರವಾಧ್ಯಕ್ಷ ಪ್ರಸನ್ನಕುಮಾರ್, ಹೋಬಳಿ ವೀರಶೈವ ಘಟಕದ ಉಪಾಧ್ಯಕ್ಷ ಕೃಪಾ ಶಂಕರ್, ಮುಖಂಡರಾದ ತೋಟಿ ನಾಗರಾಜ್, ದೊರೆಸ್ವಾಮಿ, ಪುಟ್ಟಸ್ವಾಮಿ, ಎನ್.ಸಿ.ಕುಮಾರ್, ಎನ್.ಆರ್.ಶಿವಕುಮಾರ್, ಪಟೇಲ್ ಕುಮಾರ್, ಎನ್.ಎಸ್.ಮಂಜುನಾಥ್, ಚಂದ್ರು, ಪುರ ಶಿವಶಂಕರ್, ಹುಲಿಕೆರೆ ಸಂಪತ್‌ಕುಮಾರ್, ಹೊನ್ನಮರನಹಳ್ಳಿ ಬಸವರಾಜ್, ಎನ್.ಆರ್.ರುದ್ರಸ್ವಾಮಿ, ಉಮೇಶ್, ಎನ್.ಪ್ರಭುಸ್ವಾಮಿ, ಪ್ರಸನ್ನ ಕೇಶವಚಾರ್ ಹಾಜರಿದ್ದರು.