

ರಾಮನಗರ : ಜಿಲ್ಲೆಯಲ್ಲಿ ಜಾತಿ ಆಧಾರದ ಮೇಲೆ ಸ್ಮಶಾನಕ್ಕಾಗಿ ಭೂಮಿಯನ್ನು ಒದಗಿಸುವುದಿಲ್ಲ. ಬದಲಿಗೆ ಸಾರ್ವಜನಿಕ ಸ್ಮಶಾನವನ್ನು ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಕೊಂಡಿದ್ದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ (ದೌರ್ಜನ್ಯ ಪ್ರತಿಬಂಧ) ತಿದ್ದುಪಡಿ ಕಾಯ್ದೆ2015ರ ಅನುಷ್ಠಾನ ಸಂಬಂಧ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿ 1000 ಜನಸಂಖ್ಯೆಗೆ 18 ಗುಂಟೆ ಜಾಗವಷ್ಟೇ ಸಾರ್ವಜನಿಕ ಸ್ಮಶಾನಕ್ಕಾಗಿ ಪ್ರತಿ ಗ್ರಾಮಕ್ಕೆ ಒದಗಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸ್ಮಶಾನಕ್ಕಾಗಿ ಸ್ಥಳದ ಸಮಸ್ಯೆ ಇರುವುದಿಲ್ಲ. ಯಾವುದಾದರು ಸಮಸ್ಯೆಗಳಿದ್ದಲ್ಲಿ ಅದನ್ನು ಪರಿಹರಿಸಲಾಗುವುದು ಹಾಗೂ ಒಂದು ವೇಳೆ ಸಾರ್ವಜನಿಕವಾಗಿ ಗುರುತಿಸಲಾದ ಸ್ಮಶಾನ ಜಾಗದಲ್ಲಿ ಅನ್ಯ ಜಾತಿಯರಿಗೆ ಜಾಗ ನೀಡಲು ನಿರಾಕರಿಸಿದರೆ ಅಂತಹವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿರುವ ಎಲ್ಲ ಸ್ಮಶಾನಗಳಿಗೆ ಸರ್ವೇ ವಾಡಿಸಬೇಕು, ಗಡಿ ಗುರುತುಹಾಕಬೇಕು, ಸ್ಮಶಾನವನ್ನು ಸಂಪರ್ಕಿಸುವ ಹಾಗೂ ಸಾರ್ವಜನಿಕರು ಓಡಾಡುವ ರಸ್ತೆ ಇರಬೇಕು ಮತ್ತು ಸಾರ್ವಜನಿಕ ಸ್ಮಶಾನ ಎಂಬ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸಲು ತಹಸೀಲ್ದಾರರು ಕ್ರಮವಹಿಸುವಂತೆ ಸೂಚಿಸಿದರು.
ಸಮಿತಿಯ ಸದಸ್ಯ ಚೆಲುವರಾಜು ಮಾತನಾಡಿ, ದೊಡ್ಡಮಣ್ಣುಗುಡ್ಡೆ ಮತ್ತು ಚಿಕ್ಕಮಣ್ಣುಗುಡ್ಡೆ ಹಳ್ಳಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನರಿದ್ದು, ಅವರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಅವರ ಜಮೀನಿಗೆ ಪೌತಿ ಖಾತೆ ಆಗುತ್ತಿಲ್ಲ. ಆದುದರಿಂದ ಆ ಸಮಸ್ಯೆ ಪರಿಹರಿಸುವಂತೆ ಕೋರಿದರು. ದೊಡ್ಡಮಣ್ಣುಗುಡ್ಡೆ ಮತ್ತು ಚಿಕ್ಕಮಣ್ಣುಗುಡ್ಡೆ ಪ್ರದೇಶವು ಅರಣ್ಯ ವಲಯಕ್ಕೆ ಸೇರಿವುದರಿಂದ ಅರಣ್ಯ ವಲಯದಿಂದ ಈ ಪ್ರದೇಶವನ್ನು ಜನವಸತಿ ಪ್ರದೇಶವಾಗಿ ವಾಡಲು ಅನುಮತಿ ನೀಡುವಂತೆ ಸುಪ್ರಿಂಕೋರ್ಟ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಸಭೆಗೆ ತಿಳಿಸಿದರು.
ಸಮಿತಿಯ ಸದಸ್ಯ ರೋಹಿತ್ ಮಾತನಾಡಿ, ಚನ್ನಪಟ್ಟಣದ ಎಸ್.ಎಂ. ಹಳ್ಳಿಯಲ್ಲಿ ಕೆರೆಗೆ ಹೊಂದಿಕೊಂಡಂತೆ ಸ್ಮಶಾನಕ್ಕೆ ಜಾಗ ನೀಡಲಾಗಿದೆ ಎಂದು ತಿಳಿಸಿದರು. ಜೀವಿತ ಕೆರೆಗಳಲ್ಲಿ ಸ್ಮಶಾನಕ್ಕೆ ಜಾಗ ನೀಡಲು ಅವಕಾಶವಿರುವುದಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ಕ್ರಮವಹಿಸುವಂತೆ ಚನ್ನಪಟ್ಟಣ ತಹಸೀಲ್ದಾರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಸಮಿತಿಯ ಸದಸ್ಯರಾದ ಗೋಪಾಲಕಷ್ಣ ವಾತನಾಡಿ, ವಾಗಡಿಯಲ್ಲಿರುವ ನಗರಸಭೆಯ ಮಳಿಗೆಗಳಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರಿಗೆ ಮೀಸಲಾತಿ ನೀಡುತ್ತಿಲ್ಲವೆಂದು ತಿಳಿಸಿದರು. ಈ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ವಾಗಡಿ ಪುರಸಭೆ ಮುಖ್ಯಾಧಿಕಾರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
560 ಉಪ ಗ್ರಾಮಗಳನ್ನು ನಿರ್ಮಿಸುತ್ತಿದ್ದು, ಇದು ರಾಜ್ಯದಲ್ಲಿ ಮೊದಲ ಜಿಲ್ಲೆಯಾಗಿದೆ. ಇವು ಗ್ರಾಮ ಠಾಣಾ ವ್ಯಾಪ್ತಿಗೆ ಸೇರದಿರುವ ಸರ್ಕಾರದ ಜಮೀನು ಮತ್ತು ಸರ್ವೇ ನಂಬರ್‌ಗಳನ್ನು ಹೊಂದಿರುವ ಗ್ರಾಮಗಳನ್ನು ಉಪ ಗ್ರಾಮಗಳೆಂದು ೋಷಿಸಿ ಅವುಗಳಿಗೆ ಇಖಾತೆ ಸೇರಿ ಎಲ್ಲ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ,ಪರಿಶಿಷ್ಟ ವರ್ಗದ (ದೌರ್ಜನ್ಯ ಪ್ರತಿಬಂಧ) ತಿದ್ದುಪಡಿ ಕಾಯ್ದೆ2015ರ ಅನುಷ್ಠಾನ ಸಂಬಂಧ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಹೊಸ ಸದಸ್ಯರಾದ ಚೆಲುವರಾಜು , ಬಾಬು, ಗೋಪಾಲಕೃಷ್ಣ, ಶಿವರಾಜು, ಶಿವಕುವಾರ್, ಮಹೇಶ್ ಮತ್ತು ರೋಹಿತ್ ಅವರನ್ನು ಜಿಲ್ಲಾಧಿಕಾರಿಗಳು ಅಭಿನಂದಿಸಿದರು.
ನಿಗದಿತ ಸಮಯದೊಳಗೆ ವಿತರಿಸಿ: ದೌರ್ಜನ್ಯದಲ್ಲಿ ಕೊಲೆ, ಮರಣ ಹೊಂದಿದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಕುಟುಂಬದ ಅವಲಂಬಿತರಿಗೆ ಪರಿಹಾರ, ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ, ಪಿಂಚಣಿ, ನೊಂದ ಸಂತ್ರಸ್ತರ ಮಕ್ಕಳಿಗೆ ವಸತಿ ಶಾಲೆಯ ಸೌಕರ್ಯ ಒದಗಿಸುವುದರ ಜತೆಗೆ ಕೃಷಿ ಭೂಮಿ ಮಂಜೂರು ವಾಡಲಾಗುವುದು. ಈ ನಿಯಮದಲ್ಲಿ ಯಾವುದೇ ವಿಳಂಬ ಇರುವುದಿಲ್ಲ. ಮರಣ ಹೊಂದಿದ ಅವಲಂಬಿತರಿಗೆ 24 ಗಂಟೆಯೊಳಗೆ ಪರಿಹಾರ ನೀಡಲಾಗುವುದು. ಜಾತಿ ಪ್ರವಾಣ ಪತ್ರವನ್ನು ಅಗತ್ಯ ದಾಖಲಾತಿಗಳನ್ನು ಸಂಗ್ರಹಿಸಿ ಗ್ರಾಮಲೆಕ್ಕಾಧಿಕಾರಿಗಳು ನಿಗದಿತ ಸಮಯದೊಳಗೆ ವಿತರಿಸಬೇಕು ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ದಿಗ್ವಿಜಯ ಬೋಡ್ಕೆ,ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಿವಕುಮಾರ್, ಉಪವಿಭಾಗಾಧಿಕಾರಿ ಬಿನೋಯ್, ಡಿವೈಎಸ್‌ಪಿ ದಿನಕರ್ ಶೆಟ್ಟಿ ಮುಂತಾದವರು ಇದ್ದರು.