ಆತ್ಮಹತ್ಯೆ ಕಬಂಧದಲ್ಲಿ ಯುವಜನತೆ! 10ರಲ್ಲೊಬ್ಬ ಕಾಲೇಜು ಸ್ಟೂಡೆಂಟ್‌ಗೆ ಆತ್ಮಹತ್ಯೆ ದುರಾಲೋಚನೆ

Published on

ಪಂಕಜ ಕೆ.ಎಂ. ಬೆಂಗಳೂರು

ಭಾರತದಲ್ಲಿ ಕಾಲೇಜು ವ್ಯಾಸಂಗನಿರತ ಪ್ರತಿ 10 ವಿದ್ಯಾರ್ಥಿಗಳಲ್ಲಿ ಒಬ್ಬ ಆತ್ಮಹತ್ಯೆ ಯೋಚನೆ ಹೊಂದಿದ್ದಾನೆ ಎಂಬ ಆಘಾತಕಾರಿ ಅಂಶ ಸಮೀಕ್ಷೆಯಿಂದ ಬಹಿರಂಗಗೊಂಡಿದೆ.

ವಿದ್ಯಾರ್ಥಿಗಳಲ್ಲಿ ಈ ರೀತಿಯ ಆಲೋಚನೆಗಳಿಗೆ ಕಾರಣ ತಿಳಿಯಲು ಕರ್ನಾಟಕ ಸೇರಿ ದೇಶದ 9 ರಾಜ್ಯಗಳ 30 ವಿವಿಗಳಲ್ಲಿನ 8,542 ವಿದ್ಯಾರ್ಥಿಗಳಲ್ಲಿ ನಡೆಸಲಾದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಅತ್ಮಹತ್ಯೆ ಆಲೋಚನೆ ಮಾಡುವ ವಿದ್ಯಾರ್ಥಿಗಳಲ್ಲಿ ಮೂರನೇ ಒಂದು ಭಾಗದಷ್ಟು ಮಂದಿ ಜೀವನ ಕೊನೆಗೊಳಿಸಿಕೊಳ್ಳಲು ಪ್ರಯತ್ನಿಸಿರುವುದು ವರದಿಯಾಗಿದೆ.

ನಿಮ್ಹಾನ್ಸ್, ಸೆಂಟರ್ ಾರ್ ಮೆಂಟಲ್ ಹೆಲ್ತ್, ಮೆಲ್ಬೋರ್ನ್ ಸ್ಕೂಲ್ ಆ್ ಪಾಪ್ಯುಲೇಷನ್ ಆ್ಯಂಡ್ ಗ್ಲೋಬಲ್ ಹೆಲ್ತ್, ಆಸ್ಟ್ರೇಲಿಯಾದ ಮೆಲ್ಬೋರ್ನ್ ವಿವಿ, ಸ್ಕೂಲ್ ಆ್ ಸೈಕಾಲಜಿ, ಬರ್ಮಿಂಗ್‌ಹ್ಯಾಮ್ ವಿವಿ, ಬ್ರಿಟನ್ ದೇಶಗಳ ಸಹಕಾರದೊಂದಿಗೆ ಭಾರತದ ಇತರ ಏಳು ಸಂಸ್ಥೆಗಳ ಸಂಶೋಧಕರು ‘ಭಾರತದ ಕಾಲೇಜು ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆ ಯೋಚನೆ ಮತ್ತು ಪ್ರಯತ್ನಗಳು’ ವಿಷಯ ಕುರಿತು ಅಧ್ಯಯನ ನಡೆಸಿದ್ದಾರೆ. ಈ ವರದಿ ಕಳೆದ ೆಬ್ರವರಿಯಲ್ಲಿ ಜರ್ನಲ್ ಆ್ ಎೆಕ್ವಿವ್ ಡಿಸಾರ್ಡರ್ಸ್ ರಿಪೋರ್ಟ್ಸ್‌ನಲ್ಲಿ ಪ್ರಕಟವಾಗಿತ್ತು.

ಸಾಯುವುದಕ್ಕೂ ತಾಲೀಮು:

ಆತ್ಮಹತ್ಯೆಗೆ ಯತ್ನಿಸುವವರು ಏಕಾಏಕಿ ಇಂತಹ ನಿರ್ಧಾರ ಕೈಗೊಳ್ಳುವುದಿಲ್ಲ. ಬದಲಿಗೆ ತಿಂಗಳುಗಟ್ಟಲೆ, ಇನ್ನೂ ಕೆಲವರು ವರ್ಷಾನುಗಟ್ಟಲೆ ಇದರ ಬಗ್ಗೆ ಯೋಚಿಸಿರುತ್ತಾರೆ. ಇಂತಹವರಲ್ಲಿ ಬಹಳಷ್ಟು ಮಂದಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ತಾಲೀಮು ನಡೆಸಿರುತ್ತಾರೆ. ಇತರರು ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಅದರಿಂದ ಪ್ರೇರೇಪಿತರಾಗುವುದೂ ಉಂಟು ಎಂದು ವರದಿಯಲ್ಲಿ ಹೇಳಿದೆ.

ಕಾರಣವೇನು?:

ಅಧ್ಯಯನ ಸಂದರ್ಭದಲ್ಲಿ ಶೈಕ್ಷಣಿಕ ಕಾರಣಗಳಿಂದ ಆತ್ಮಹತ್ಯೆ ಯೋಚನೆ ಮಾಡುವುದಕ್ಕಿಂತಲೂ ಇತರೆ ಕಾರಣಗಳು ಹೆಚ್ಚು ವರದಿಯಾಗಿವೆ. ಅಂದರೆ ಕೌಟುಂಬಿಕ ಕಲಹ, ಸಂಬಂಧಗಳಲ್ಲಿ ಬಿರುಕು, ಆರ್ಥಿಕ ಸಮಸ್ಯೆ, ಪಾಲಕರಲ್ಲಿ ಸಮಸ್ಯೆ ಹೇಳಿಕೊಳ್ಳಲಾಗದ ವಾತಾವರಣ, ದೀರ್ಘಕಾಲ ಕುಟುಂಬದವರಿಂದ (ಹಾಸ್ಟೆಲ್ ವಾಸ) ದೂರ ಉಳಿಯುವುದು, ತಂಬಾಕು- ಮದ್ಯಪಾನ- ಧೂಪಮಾನ- ಡ್ರಗ್ಸ್‌ನಂತಹ ದುಶ್ಚ್ಚಟಗಳಿಗೆ ಒಳಗಾಗುವುದು, ಪ್ರೀತಿ ವೈಲ್ಯ, ಒತ್ತಡಮಯ ಜೀವನ, ಆತಂಕದಂತಹ ಹಲವು ಅಂಶಗಳು ಆತ್ಯಹತ್ಯೆಗೆ ಕಾರಣಗಳು ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಸಲಹೆಗಳು:

ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಅಂಶಗಳೆರಡನ್ನೂ ಪರಿಹರಿಸಲು ಭಾರತೀಯ ಶಿಕ್ಷಣ ಸಂಸ್ಥೆಗಳಲ್ಲಿ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಆಯೋಜಿಸುವ ಅಗತ್ಯವಿದೆ. ಆ ಮೂಲಕ ಸಾಮಾಜಿಕ ಬೆಂಬಲವನ್ನು ಬಲಪಡಿಸುವ, ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಕಾಲೇಜು ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ಬಳಕೆ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯತಂತ್ರಗಳನ್ನು ಜಾರಿಗೆ ತರುವ ಮೂಲಕ ಸಾರ್ವಜನಿಕ ಆರೋಗ್ಯ ಮಧ್ಯಸ್ಥಿಕೆ ವಹಿಸುವ ಅಗತ್ಯವಿದೆ ಎಂದು ಅಧ್ಯಯನ ವರದಿಯಲ್ಲಿ ಸಲಹೆ ನೀಡಲಾಗಿದೆ.

ಯತ್ನಿಸುವವರ ವರ್ತನೆ ಹೇಗಿರುತ್ತದೆ?

ಪ್ರತಿ ಕಾಯಿಲೆಗಳಿಗೆ ರೋಗ ಲಕ್ಷಣಗಳು ಇರುವಂತೆ ಆತ್ಮಹತ್ಯೆಗೆ ಯತ್ನಿಸುವವರಲ್ಲಿ ಕೆಲ ಬದಲಾದ ವರ್ತನೆಗಳು ಕಂಡುಬರುತ್ತವೆ. ಜನರಿಂದ ದೂರವಾಗಿ ಏಕಾಂಗಿತನ ಬಯಸುವುದು, ಮಾದಕ ವ್ಯಸನ, ನಡವಳಿಕೆಯಲ್ಲಿ ಬದಲಾವಣೆ, ಏಕಾಏಕಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದು, ಮೌನಕ್ಕೆ ಜಾರುವುದು ಇತ್ಯಾದಿ ವರ್ತನೆಗಳು ಕಂಡುಬಂದಲ್ಲಿ ಅವರೊಂದಿಗೆ ಮಾತನಾಡುವ ಹಾಗೂ ಅವರ ಸಮಸ್ಯೆ ಆಲಿಸುವ ಪ್ರಯತ್ನ ಮಾಡಬೇಕು ಎನ್ನುತ್ತಾರೆ ಮನೋರೋಗ ತಜ್ಞರು.

ಭಾರತದಲ್ಲಿ ಆತ್ಮಹತ್ಯೆ ಪ್ರಕರಣಗಳು ಅಧಿಕ

ಇತ್ತೀಚಿನ ಅತ್ಮಹತ್ಯೆ ದರದ ಅಂದಾಜು ಪ್ರಕಾರಣ ದೇಶದಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ 18- 21 ಸಾವು (ಜಾಗತಿಕವಾಗಿ ಲಕ್ಷಕ್ಕೆ 11 ಸಾವು) ಸಂಭವಿಸುತ್ತಿವೆ. ಇದರ ಪರಿಣಾಮ ವಾರ್ಷಿಕ ಅಂದಾಜು 2.30 -2.50 ಲಕ್ಷ ಆತ್ಮಹತ್ಯೆಯಿಂದ ಸಾವು ಸಂಭವಿಸುತ್ತವೆ. ಇದು ಜಾಗತಿಕ ಆತ್ಮಹತ್ಯೆಗಳ ದರದಲ್ಲಿ ಶೇ. 28 (ಜಾಗತಿಕವಾಗಿ ಶೇ. 17) ಇದೆ. ಹಾಗಾಗಿ ಭಾರತದಲ್ಲಿ ಆತ್ಮಹತ್ಯೆ ತಡೆಗಟ್ಟುವಿಕೆ ಸಂಬಂಧ ಸಾರ್ವಜನಿಕ ಆರೋಗ್ಯ ವಿಧಾನವು ವೇಗ ಪಡೆದುಕೊಂಡಿದೆ. ಆತ್ಮಹತ್ಯೆ ತಡೆಗೆ ಶಿಕ್ಷಣ ಸಂಸ್ಥೆಗಳನ್ನು ಪ್ರಮುಖ ಕ್ಷೇತ್ರವೆಂದು ಗುರುತಿಸಲಾಗಿದೆ. ಏಕೆಂದರೆ ಭಾರತದಲ್ಲಿ ಆತ್ಮಹತ್ಯೆಗೆ ಮುಂದಾಗುವ ಶೇ. 40 ಪ್ರಕರಣಗಳಲ್ಲಿ 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರೇ ಜಾಸ್ತಿ.

ಕೋಟ್:

ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಅಂಶಗಳನ್ನು ಪರಿಹರಿಸಲು ಭಾರತೀಯ ಶಿಕ್ಷಣ ಸಂಸ್ಥೆಗಳಲ್ಲಿ ಆತ್ಮಹತ್ಯೆ ತಡೆಗಟ್ಟುವ ಕಾರ್ಯಕ್ರಮಗಳ ಅಗತ್ಯವನ್ನು ಈ ಅಧ್ಯಯನ ಒತ್ತಿ ಹೇಳಿದೆ. ಇದರಿಂದ ಆತ್ಮಹತ್ಯಾ ಆಲೋಚನೆಗಳನ್ನು ತಗ್ಗಿಸಬಹುದಾಗಿದೆ.

-ಡಾ. ಅನೀಶ್ ವಿ. ಚೆರಿಯನ್ , ನಿಮ್ಹಾನ್ಸ್- ಆತ್ಮಹತ್ಯೆ ತಡೆಗಟ್ಟುವಿಕೆ ಕೇಂದ್ರದ ಮುಖ್ಯಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net