ಕಾರು ಪಲ್ಪಿಯಾಗಿ ಒಬ್ಬ ಸಾವು

ಕಾರು ಪಲ್ಪಿಯಾಗಿ ಒಬ್ಬ ಸಾವು
Published on

ಚನ್ನರಾಯಪಟ್ಟಣ: ತಾಲೂಕಿನ ಅಂಕೇನಹಳ್ಳಿಯ ಚನ್ನರಾಯಪಟ್ಟಣ-ಅರಸೀಕೆರೆ ರಾಜ್ಯ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿದ ಕಾರು ಜಮೀನಿಗೆ ನುಗ್ಗಿ ಪಲ್ಟಿಯಾದ ಪರಿಣಾಮ ಒಬ್ಬರು ಮೃತಪಟ್ಟು, 5 ಜನ ಗಾಯಗೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿ ಮೂಲದ ಸುನೀಲ್(34) ಮೃತಪಟ್ಟಿದ್ದು, ಮಂಜುನಾಥ, ಕಾರ್ತಿಕ್, ರಾಜೇಶ್, ಶ್ರೀನಿವಾಸರೆಡ್ಡಿ, ಆನಂದ ಗಾಯಗೊಂಡಿದ್ದಾರೆ.

ಕನಕಪುರ ಸಮೀಪದ ಕಬ್ಬಾಳಮ್ಮ ದೇವಾಲಯಕ್ಕೆ ತೆರಳುವ ಸಂದರ್ಭ ಶನಿವಾರ ಬೆಳಗ್ಗೆ 4 ಗಂಟೆಗೆ ದುರ್ಘಟನೆ ಸಂಭವಿಸಿದೆ.

ರಾಜೇಶ್ ಎಂಬುವರು ಕಾರು ಚಾಲನೆ ಮಾಡುತ್ತಿದ್ದು, ರಸ್ತೆ ಎಡಬದಿಯ ಜಮೀನಿಗೆ ನುಗ್ಗಿಸಿದ ಪರಿಣಾಮ ಕಾರು ಪಲ್ಟಿಯಾಗಿದೆ. ಕಾರಿನಲ್ಲಿದ್ದ 6 ಜನರಿಗೂ ತೀವ್ರ ಗಾಯವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಸುನೀಲ್ ಕೊನೆಯುಸಿರೆಳೆದರು. ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net