ಸೆ.5ವರೆಗೆ ಬೆಂಗಳೂರಲ್ಲಿ ಓಣಂ ಹಬ್ಬ ಆಚರಣೆ

onam1
Published on

ಬೆಂಗಳೂರು:ಕೇರಳದ ಸಂಸ್ಕೃತಿ ಬಿಂಬಿಸುವ ಪ್ರಸಿದ್ಧ ‘ಓಣಂ’ ಹಬ್ಬದ ನಿಮಿತ್ತ ಆ.25ರಿಂದ ಸೆ.5ರವರೆಗೆ ಧಣಿಸಂದ್ರ ಮುಖ್ಯರಸ್ತೆಯ ‘ಭಾರತೀಯ ಮಾಲ್’ನಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಚೆಂಡಮೇಳ, ಜಾನಪದ ನೃತ್ಯ, ಹುಲಿ ನೃತ್ಯ, ಪೂಕಳಂ ಮತ್ತು ಪಾಯಸ ತಯಾರಿಸುವ ಸ್ಪರ್ಧೆ ಇರಲಿದೆ. ವಿಜೇತರಿಗೆ ಬಹುಮಾನ ಸಿಗಲಿದೆ. ಮಡಿಕೆ ಒಡೆಯುವುದು,ಟಗ್ ಆಫ್​ ವಾರ್, ಗೋಣಿ,ಇಟ್ಟಿಗೆ ಓಟ ಸೇರಿ ಇತರ ಸ್ಪರ್ಧೆಗಳಿವೆ. ಎಲ್ಲ ವಯಸ್ಸಿನವರು ಭಾಗಿಯಾಗಬಹುದು. ಕೇರಳದ ಹಬ್ಬಗಳ ಕಿರೀಟಧಾರಿಯಾದ ಓಣಂ, ಪೌರಾಣಿಕ ರಾಜ ಮಹಾಬಲಿಯನ್ನು ಆಚರಿಸುತ್ತದೆ. ಸಮೃದ್ಧಿ, ಸಾಮರಸ್ಯ,ಸಂತಸದ ಋತುವನ್ನು ಹಬ್ಬ ತರಲಿದೆ. ಕೇರಳದವರು ಸಂಪ್ರದಾಯಿಕ ಉಡುಪು ಧರಿಸಿ ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net