ಓಣಂ ಆಚರಣೆ, ಕುಟುಂಬ ಸಮ್ಮಿಲನ

New Project (17)
Published on

ಸುಳ್ಯ: ಕರ್ನಾಟಕ ನಾಯರ್ ಸರ್ವೀಸ್ ಸೊಸೈಟಿ ಸುಳ್ಯ ಕರಯೋಗಂ ವತಿಯಿಂದ ಓಣಂ ಹಬ್ಬ ಆಚರಣೆ ಮತ್ತು ಕುಟುಂಬ ಸಮ್ಮಿಲನ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು. ಕೇರಳ ಎನ್‌ಎಸ್‌ಎಸ್ ಡೈರೆಕ್ಟರ್ ಬೋರ್ಡ್ ಸದಸ್ಯ ಎ.ಬಾಲಕೃಷ್ಣ ನಾಯರ್ ಉದ್ಘಾಟಿಸಿದರು.

ಕೆಎನ್‌ಎಸ್‌ಎಸ್ ಸುಳ್ಯ ಕರಯೋಗಂ ಅಧ್ಯಕ್ಷ ಕೃಷ್ಣನ್ ನಾಯರ್ ಕುತ್ತಮೊಟ್ಟೆ ಅಧ್ಯಕ್ಷತೆ ವಹಿಸಿದ್ದರು. ಪದ್ಮನಾಭನ್ ನಾಯರ್ ಮಧುವನ, ಚಂದ್ರಮೋಹನ್, ಶಶಿಧರ ಪಿಳೈ ್ಳ, ಬಾಲಕೃಷ್ಣನ್ ನಾಯರ್ ನೀರಬಿದಿರೆ, ಪುಷ್ಪಾ ಡಿ.ಪ್ರಸಾದ್ ಕಾನತ್ತೂರ್ ಅವರನ್ನು ಸನ್ಮಾನಿಸಲಾಯಿತು. ಕೆಎನ್‌ಎಸ್‌ಎಸ್ ಬೋರ್ಡ್ ಸದಸ್ಯ ರಾಜನ್ ನಂಬ್ಯಾರ್, ಮಂಗಳೂರು ಕರಯೋಗಂನ ಕಾರ್ಯಕಾರಿ ಸಮಿತಿ ಸದಸ್ಯ ಇ.ವಾಮನನ್ ನಾಯರ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಸುಳ್ಯ ಕರಯೋಗಂ ಕಾರ್ಯದರ್ಶಿ ಶಶಿಧರನ್ ನಾಯರ್ ಉಬರಡ್ಕ, ಖಜಾಂಚಿ ಪ್ರಭಾಕರನ್ ನಾಯರ್, ಕೆಎನ್‌ಎಸ್‌ಎಸ್ ಮಹಿಳಾ ಘಟಕದ ಅಧ್ಯಕ್ಷೆ ಭವಾನಿ ಮುಂಡಾತ್ ಬಾರ್ಪಣೆ, ಕಾರ್ಯದರ್ಶಿ ಶೈಲಜಾ ಜಯರಾಜ್ ನೀರಬಿದಿರೆ, ಖಜಾಂಚಿ ಜ್ಯೋತಿ ಮಧುಸೂಧನ ಉಪಸ್ಥಿತರಿದ್ದರು. ಕೆಎನ್‌ಎಸ್‌ಎಸ್ ಬೋರ್ಡ್ ಸದಸ್ಯರಾದ ಬಾಲಕೃಷ್ಣನ್ ನಾಯರ್ ಸ್ವಾಗತಿಸಿದರು. ದುರ್ಗಾಕುಮಾರ್ ನಾಯರ್‌ಕೆರೆ ನಿರೂಪಿಸಿದರು. ಭಾಸ್ಕರನ್ ನಾಯರ್ ಮಧುವನ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net