ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಆರಂಭ

New Project (7)
Published on

ಸುಬ್ರಹ್ಮಣ್ಯ: ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸೆ.21ರಿಂದ ಆರಂಭಗೊಂಡಿದೆ.

ಕ್ಷೇತ್ರದ ತಂತ್ರಿ ಕೆಮ್ಮಿಂಜೆ ನಾಗೇಶ್ ತಂತ್ರಿ ಮಾರ್ಗದರ್ಶನದಲ್ಲಿ ಪವಿತ್ರಪಾಣಿ ಕೇಶವ ಪೂದೆನ್ನಾಯರ ಉಪಸ್ಥಿತಿಯಲ್ಲಿ ದೇವಳದ ಪ್ರಧಾನ ಅರ್ಚಕ ಶ್ರೀ ಹರಿ ಕುಂಜೂರಾಯ, ಪ್ರಶಾಂತ್ ಪರ್ಲತ್ತಾಯ, ಕೃಷ್ಣ ಪ್ರಸಾದ್ ಬಳಗದವರಿಂದ ವೈಧಿಕ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಉತ್ಸವ ಆರಂಭಗೊಂಡಿತು. ಆರಂಭದ ದಿನ ಮಾಮೂಲಿ ರಂಗಪೂಜೆ, ಸೇವಾ ರಂಗ ಪೂಜೆ, ದೇವಿಯ ಭಕ್ತರಿಂದ ವಿವಿಧ ಸೇವಾ ಪೂಜೆ ನಡೆಯಿತು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಜಿ.ಲೋಕನಾಥ ರೈ ಪಟ್ಟೆ, ಸದಸ್ಯರಾದ ಲೋಕೇಶ್ ಕೇರ್ಪಡ, ಮಾಚಣ್ಣ ಗೌಡ ಹುದೇರಿ, ಗುಣವತಿ ನಾವೂರು, ವೇಣುಗೋಪಾಲ್ ರೈ ಕಲ್ಲೇರಿ, ಪ್ರಮೋದ್ ರೈ ಕಟ್ಟ ಹೊಸಜಾಲು, ಬಿಜಿಲ ಅಲೆಕ್ಕಾಡಿ, ಕಸ್ತೂರಿ ಚಂದ್ರಶೇಖರ, ಕೂಡು ಕಟ್ಟು, ಉತ್ಸವ ಸಮಿತಿ, ಸೇವಾ ಸಮಿತಿ, ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net