

ಕಾಸರಗೋಡು: ಸೀತಾಂಗೋಳಿಯ ಸಂತೋಷ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಓಣಂ ಹಬ್ಬದ ಆಚರಣೆ ರೋಯಲ್ ಹೆರಿಟೇಜ್ ರೆಸಾರ್ಟ್‌ನಲ್ಲಿ ಜರುಗಿತು.
ಕೆಥೊಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಮುಖ್ಯ ಅತಿಥಿಯಾಗಿ ಮಾತನಾಡಿ, ಭಾಷೆ, ಧರ್ಮವನ್ನು ಮೀರಿ, ಏಕತೆಯ ಸಂದೇಶ ಸಾರುವಲ್ಲಿ ಓಣಂ ಹಬ್ಬ ಮಹತ್ವದ ಪಾತ್ರ ವಹಿಸುತ್ತಿರುವುದಾಗಿ ತಿಳಿಸಿದರು.
ಭವ್ಯ ಮೆರವಣಿಗೆಯನ್ನು ಅಹಮ್ಮದ್ ಹಾಜಿ ಉದ್ಘಾಟಿಸಿದರು. ಮಹಾಲಿಂಗ ಕೆ. ಅಧ್ಯಕ್ಷತೆ ವಹಿಸಿದ್ದರು. ಕ್ಲಬ್ ಸದಸ್ಯರು, ಅವರ ಕುಟುಂಬಸ್ಥರಿಂದ ಕಾರ್ಯಕ್ರಮ ವೈವಿಧ್ಯ ನಡೆಯಿತು. ಸ್ಪರ್ಧಾ ವಿಜೇತರಿಗೆ, ಪ್ರತಿಭಾನ್ವಿತರಿಗೆ ಸ್ಮರಣಿಕೆ ನೀಡಲಾಯಿತು. ವಕೀಲ ಥಾಮಸ್ ಡಿಸೋಜ ರಚಿಸಿದ ಸೀತಾಂಗೋಳಿಯ ಗತ ವೈಭವ ಪುಸ್ತಕದ ಮುಖಪುಟ ವಿನ್ಯಾಸಗೊಳಿಸಿದ ಉದಯ ಕಿಳಿಂಗಾರ್ ಅವರನ್ನು ಸನ್ಮಾನಿಸಲಾಯಿತು. ವಕೀಲ ಥಾಮಸ್ ಡಿಸೋಜ ಸ್ವಾಗತಿಸಿದರು. ಅಪ್ಪಣ್ಣ ವಂದಿಸಿದರು. ವಿಶೇಷ ಓಣಂ ಔತಣ ಕೂಟ ಆಯೋಜಿಸಲಾಗಿತ್ತು.