ಕುಟುಂಬಶ್ರೀ ಸಿಡಿಎಸ್ ಘಟಕಗಳಿಂದ ಓಣಂ ಸಂತೆ: ಪೆರ್ಲದಲ್ಲಿ ಭರ್ಜರಿ ವ್ಯಾಪಾರ

11-onam
Published on

ಕಾಸರಗೋಡು: ನಾಡಿನೆಲ್ಲೆಡೆ ಓಣಂ ಸಂಭ್ರಮ ಮನೆಮಾಡುತ್ತಿದ್ದಂತೆ ಜನತೆಗೆ ಶುದ್ಧ, ವಿಷರಹಿತ ತರಕಾರಿ ಹಾಗೂ ಇತರ ಸಾಮಗ್ರಿ ಪೂರೈಸಲು ಸರ್ಕಾರ ಯೋಜನೆ ಹಮ್ಮಿಕೊಂಡಿದೆ. ಇದಕ್ಕಾಗಿ ಓಣಂ ಸಂತೆ ಆರಂಭಗೊಂಡಿದ್ದು, ಕುಟುಂಬಶ್ರೀ ಸಿಡಿಎಸ್ ಘಟಕಗಳ ಮೂಲಕ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿರುಸಿನ ವ್ಯಾಪಾರ ನಡೆಯುತ್ತಿದೆ.

ಸ್ಥಳೀಯವಾಗಿ ತಯಾರಿಸುವ ಸಾವಯವ ತರಕಾರಿ ಉತ್ಪನ್ನಗಳನ್ನು ಹೆಚ್ಚಿನ ದರ ನೀಡಿ ಖರೀದಿಸಿ, ಸಾರ್ವಜನಿಕರಿಗೆ ಚಿಲ್ಲರೆ ವ್ಯಾಪಾರ ದರಕ್ಕಿಂತ ಕಡಿಮೆ ಮೊತ್ತಕ್ಕೆ ಮಾರಾಟ ಮಾಡಲು ಓಣಂ ಸಂತೆ ಆರಂಭಿಸಲಾಗಿದೆ. ಸಾವಯವ ತರಕಾರಿ ಜತೆಗೆ ಉಪ್ಪಿನಕಾಯಿ, ಆಹಾರ ಪದಾರ್ಥ ಸೇರಿದಂತೆ ಕುಟುಂಬಶ್ರೀ ಉತ್ಪನ್ನಗಳು ಒಣಂ ಸಂತೆಯಲ್ಲಿ ಮಾರಾಟಕ್ಕಿರಿಸಲಾಗಿದೆ. ಸೆ.14ರವರೆಗೆ ಮಾರಾಟ ಮಳಿಗೆ ಜಿಲ್ಲೆಯ ಎಲ್ಲ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರೆದು ಕಾರ್ಯಾಚರಿಸಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net