

ಬೆಂಗಳೂರು : ಸಾಲುಮರದ ತಿಮ್ಮಕ್ಕನ ಪರಿಸರ ಕಾಳಜಿಯಿಂದ ಸ್ಫೂರ್ತಿ ಪಡೆದ ಕಥಕ್ ಗುರು ಶಾಮ ಭಾಟೆ ತಿಮ್ಮಕ್ಕ 113ನೇ ವರ್ಷಾಚರಣೆಯನ್ನು ಉನ್ನಾಯನ್ ಹೆಸರಿನಲ್ಲಿ ಕಥಕ್ ಗೌರವಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ನಾಳೆ (ಸೆ.27) ರಂದು ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ನಡೆಯುವ ವಿಶಿಷ್ಟ ಕಾರ್ಯಕ್ರಮಕ್ಕಾಗಿ ತಲೆಮಾರುಗಳ ಸೃಜನಾತ್ಮಕತೆ ಮತ್ತು ಕ್ರಿಯಾಶೀಲತೆಯ ಸೌಂದರ್ಯವನ್ನು ಪ್ರದರ್ಶಿಸುವ ಅದ್ಭುತ ಸಮೂಹ ನೃತ್ಯ ಸಂಯೋಜಿಸಿದ್ದಾರೆ. ಪ್ರಕೃತಿಯನ್ನು ಸಂರಕ್ಷಿಸುವಲ್ಲಿ ಪರಿಸರವಾದಿಯ ಜೀವಮಾನದ ಸಾಧನೆಗೆ ನೃತ್ಯದ ಮೂಲಕ ಗೌರವ ಸಲ್ಲಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ನೃತ್ಯ ಚಲನೆ, ಸಂಗೀತ ಮತ್ತು ಲಯದ ಮೂಲಕ ರಸ್ತೆ ಬದಿಯಲ್ಲಿ ನೂರಾರು ಮರಗಳನ್ನು ನೆಟ್ಟು ಪೋಷಿಸಿದ ತಿಮ್ಮಕ್ಕನ ಸಾಮರ್ಥ್ಯದ ಬದುಕನ್ನು ಅನಾವರಣ ಮಾಡುವ ಪ್ರಯತ್ನ ಮಾಡಲಾಗಿದೆ. ಸಂಗೀತ ಸಾಥ್‌ನಲ್ಲಿ ಸಿತಾರ್ ವಾದನದಲ್ಲಿ ಅಂಕುಶ್ ನಾಯಕ್, ಕೊಳಲುವಾದನದಲ್ಲಿ ಸದಾಜ್ ಗೋಡ್ಖಿಂಡಿ, ತಬಲಾದಲ್ಲಿ ಪ್ರದ್ಯುಮ್ನ ಕರ್ಪೂರ್ ಜುಗಲ್ಬಂದಿಯನ್ನು ನಡೆಸಿಕೊಡಲಿದ್ದಾರೆ.
ತಿಮ್ಮಕ್ಕ ಅವರ ಮಹತ್ಕಾರ್ಯವನ್ನು ಗೌರವಿಸುವುದರ ಜೊತೆಗೆ ಪರಿಸರ ಕಾಳಜಿಯನ್ನು ಹೊಸ ಪೀಳಿಗೆಗೆ ಜಾಗೃತಗೊಳಿಸುವ ನಿಟ್ಟಿನಲ್ಲಿ ಉನ್ನಾಯನ್ ಯಶಸ್ವಿಯಾಗಲಿದೆ ಎಂದು ಶಾಮ ಭಾಟೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾರ್ಯಕಮದ ಟಿಕೆಟ್‌ಗಳು ಬುಕ್ ಮೈ ಶೋ ನಲ್ಲಿ ಲಭ್ಯ ಇವೆ.