21ರಂದು ಪೆರ್ಲ ನೂರರ ನೆನಪು

Published on

ಕಾಸರಗೋಡು: ಪೆರ್ಲ ಕೃಷ್ಣ ಭಟ್​ ಸಾಂಸತಿಕ ಪ್ರತಿಷ್ಠಾನ ವತಿಯಿಂದ ಖ್ಯಾತ ಅರ್ಥಧಾರಿ, ಪೆರ್ಲ ಕೃಷ್ಣ ಭಟ್​ ಅವರ ಜನ್ಮಶತಮಾನೋತ್ಸವ'ಪೆರ್ಲ ನೂರರ ನೆನಪು'ಕಾರ್ಯಕ್ರಮ ಡಿ.21ರಂದು ಮಧ್ಯಾಹ್ನ 2ಕ್ಕೆ ಪೆರ್ಲದ ಶ್ರೀ ಭಾರತೀ ಸದನದಲ್ಲಿ ಜರುಗಲಿದೆ.

ಕಾರ್ಯಕ್ರಮದ ಅಂಗವಾಗಿ 'ಕೃಷ್ಣ ಸಂಧಾನ' ಯಕ್ಷಗಾನ ತಾಳಮದ್ದಳೆ, ಸಭಾ ಕಾರ್ಯಕ್ರಮ ನಡೆಯುವುದು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡುವರು. ಕರ್ನಾಟಕ ಸರ್ಕಾರದ ಮಾನವ ಹಕ್ಕುಗಳ ಆಯೋಗ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್​ ಐಎಎಸ್​ ಅಧ್ಯಕ್ಷತೆ ವಹಿಸುವರು. ಖ್ಯಾತ ಯಕ್ಷಗಾನ ಅರ್ಥಧಾರಿ ಮೂಡಂಬೈಲು ಗೋಪಾಲಕೃಷ್ಣ ಶಾಸಿ ಅವರಿಗೆ ಪೆರ್ಲ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಆರೆಸ್ಸೆಸ್​ನ ಅಖಿಲ ಭಾರತ ಕುಟುಂಬ ಪ್ರಬೋಧಕ್​ ಕಜಂಪಾಡಿ ಸುಬ್ರಹ್ಮಣ್ಯ ಭಟ್​ ಸಂಸ್ಮರಣಾ ಭಾಷಣ ಮಾಡುವರು. ಡಾ.ಪ್ರಭಾಕರ ಜೋಷಿ ಹಾಗೂ ಕೃಷ್ಣ ಪ್ರಸಾದ್​ ಅಡ್ಯಂತಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net