ಬಂಟ್ವಾಳ: ಐಎಫ್ಎ ಸಂಸ್ಥೆ ತನ್ನ ಆರ್ಕೈವ್ಸ್ ಮತ್ತು ಮ್ಯೂಸಿಯಂ ಕಾರ್ಯಕ್ರಮದಡಿಯಲ್ಲಿ ರಾಣಿ ಅಬ್ಬಕ್ಕ ತುಳು ಮ್ಯೂಸಿಯಂ ಸಹಯೋಗದೊಂದಿಗೆ ಐಎಫ್ಎ&ರಾಣಿ ಅಬ್ಬಕ್ಕ ತುಳು ಮ್ಯೂಸಿಯಂ ಸ್ಕಾಲರ್ಲಿ ಆ್ಯಂಡ್ ಕ್ರಿಯಟಿವ್ ಪ್ರಾಜೆಕ್ಟ್ಗಳಿಗಾಗಿ ಪ್ರಸ್ತಾವನೆಯ ಅರ್ಜಿಗಳನ್ನು ಆಹ್ವಾನಿಸಿದ್ದು, ಇದಕ್ಕೆ ಪೂರ್ವಭಾವಿಯಾಗಿ ಮುಖಾಮುಖಿ ಸಭೆಗಳನ್ನು ಡಿಸೆಂಬರ್ 7ಮತ್ತು 8ರಂದು ಬಿ.ಸಿ.ರೋಡು ಹಾಗೂ ಮಂಗಳೂರಿನಲ್ಲಿ ಆಯೋಜಿಸಿದೆ.
7ರಂದು ಸಂಜೆ 4.30ಕ್ಕೆ ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ಮುಖಾಮುಖಿ ಸಭೆ ನಡೆಯಲಿದ್ದು, ಮಂಗಳೂರಿನ ಕೊಡಿಯಾಲ್ ಗುತ್ತುವಿನ ಇಂಟ್ಯಾಕ್ ಮಂಗಳೂರು ಚಾಪ್ಟರ್ನಲ್ಲಿ 8ರಂದು ಬೆಳಗ್ಗೆ 11.30ಕ್ಕೆ ಸಭೆ ನಡೆಯಲಿದೆ.
ಪ್ರಾಜೆಕ್ಟ್ ಕುರಿತಾಗಿ ರಾಣಿ ಅಬ್ಬಕ್ಕ ತುಳು ಸಂಗ್ರಹಾಲಯದ ಸ್ಥಾಪಕರಾದ ಡಾ.ತುಕಾರಾಮ್ ಪೂಜಾರಿ, ಐಎಫ್ಎಯ ಪತ್ರಾಗಾರಗಳು ಮತ್ತು ವಸ್ತುಸಂಗ್ರಹಾಲಯದ ಕಾರ್ಯಕ್ರಮ ನಿರ್ವಹಣಾಧಿಕಾರಿ ರಿತಿಕಾ ಮಿಶ್ರಾ, ಕಲಾಶಿಕ್ಷಣದ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಕೃಷ್ಣಮೂರ್ತಿ ಟಿ.ಎನ್ ಮಾರ್ಗದರ್ಶನ ನೀಡುವರು.