18ರಂದು ಗೌರಿ ಪ್ರತಿಷ್ಠಾಪನೆ

Gowri
Published on

ಗೋಣಿಕೊಪ್ಪ: ಗೌರಿ- ಗಣೇಶೋತ್ಸವದ ಅಂಗವಾಗಿ ಇಲ್ಲಿನ ಶ್ರೀ ಉಮಾಮಹೇಶ್ವರಿ ದೇವಾಲಯ ಟ್ರಸ್ಟ್ ವತಿಯಿಂದ ಸೆ.18ರಂದು ಗೌರಿ ಆರಾಧನೆ ಆಯೋಜಿಸಲಾಗಿದೆ.

ಅಂದು ಬೆಳಗ್ಗೆ 9.30ಕ್ಕೆ ತುಲಾ ಲಗ್ನದಲ್ಲಿ ಸ್ವರ್ಣ ಗೌರಿಯ ಆವಾಹನೆ, ಹೂವಿನ ಮಂಟಪದಲ್ಲಿ ಗೌರಿಯ ಮೆರವಣಿಗೆ ನಡೆಯಲಿದೆ. ದೇವಾಲಯದ ಆವರಣದಲ್ಲಿ 11.30ಕ್ಕೆ ಗೌರಿ ಪ್ರತಿಷ್ಠೆ, ಮಹಾಪೂಜೆ ನೆರವೇರಲಿದೆ. 19ರಂದು ಬೆಳಗ್ಗೆ 9ಕ್ಕೆ ಗಣಹೋಮ, 11.30ಕ್ಕೆ ಮಹಾಗಣಪತಿ ಮೂರ್ತಿ ಪ್ರತಿಷ್ಠೆ, ನಂತರ ಮಹಾಪೂಜೆ, ಪ್ರಸಾದ ವಿನಿಯೋಗವಿದೆ. 21ರ ರಾತ್ರಿ ಗೌರಿ, ಗಣೇಶ ಮೂರ್ತಿ ಮೆರವಣಿಗೆ ನಡೆಸಿ ಸೀಗೆತೋಡು ಕೆರೆಯಲ್ಲಿ ವಿಸರ್ಜನೆ ಮಾಡಲಾಗುತ್ತದೆ ಎಂದು ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net